ಕಾಸರಗೋಡು: ಯಕ್ಷಗಾನ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ವೃತ್ತಿಪರ ಮೇಳದಲ್ಲಿ ಭಾಗವತರಾಗಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರಿಗೆ ಶ್ರೀನಿವಾಸ ವಿಶ್ವ ವಿದ್ಯಾಲಯ ವತಿಯಿಂದ ""ಸಾಧನ ಶ್ರೀ ಪ್ರಶಸ್ತಿ"" ನೀಡಿ ಗೌರವಿಸಲಾಯಿತು.
ವಿಶ್ವ ವಿದ್ಯಾಲಯದ ಶ್ಯಾಮರಾವ್ ಅವರ ಸ್ಮರಣಾರ್ಥ 40 ವರ್ಷಗಳ ತಿರುಗಾಟದ ಅನುಭವ ಹೊಂದಿರುವ ರಾಮಕೃಷ್ಣ ಮಯ್ಯ ಅವರು ಶ್ರೀ ಧರ್ಮಸ್ಥಳ ಒಂದೇ ಮೇಳದಲ್ಲಿ 35 ವರ್ಷಗಳಿಂದ ಭಾಗವತರಾಗಿದ್ದು ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಪರಿಗಣಿಸಿ ಪ್ರಶಸ್ತಿ ನೀಡಲಾಯಿತು. ರಾಘವೇಂದ್ರ ರಾವ್, ಶ್ರೀ ಶ್ರೀನಿವಾಸ ರಾವ್, ಎಂ. ಆರ್. ಪಿ. ಯಲ್. ನ ಯಚ್‍ಆರ್ ವಿಭಾಗದ ಮುಖ್ಯಸ್ಥ ಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಒಂದೇ ಮೇಳದಲ್ಲಿ 35 ವರ್ಷಗಳಿಂದ ಭಾಗವತರಾಗಿದ್ದು ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಅಪರವಾಗಿದ್ದು, ತನ್ನ ತಣದೆ ಗಡಿನಾಡು ಕಾಸರಗೋಡಿನ ಶ್ರೇಷ್ಠ ಕವಿಗಳಾದ ಸಿರಿಬಾಗಿಲು ವೆಂಕಪ್ಪಯ್ಯನವರ ಹೆಸರಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಮೂಲಕ ಯಕ್ಷಗಾನದ ಅಧ್ಯಯನ ಯೋಗ್ಯ ಹಲವಾರು ಚಟುವಟಿಕೆಗಳನ್ನು ನಡೆಸುವುದರೊಂದಿಗೆ, ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವನ್ನು ರಚಿಸಿ ಯಕ್ಷಗಾನ ಬೃಹತ್ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.