ಲಂಡನ್: ಕನ್ನಡ ಸಾಹಿತಿ ಬಾನು ಮುಷ್ತಾಕ್ ಅವರ ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್' (ಮೂಲ ಕೃತಿ: ಹಸೀನಾ ಮತ್ತು ಇತರ ಕತೆಗಳು), ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಪರಿಗಣಿಸಲು ಮಂಗಳವಾರ ಸಿದ್ಧವಾಗಿರುವ ಪಟ್ಟಿಯಲ್ಲಿದೆ.
ದೀಪಾ ಭಸ್ತಿ ಈ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಕೌಟುಂಬಿಕ ಹಾಗೂ ಸಮುದಾಯದ ತುಮುಲಗಳನ್ನು ಪ್ರಾದೇಶಿಕ ಸೊಗಡಿನೊಂದಿಗೆ, ವ್ಯಂಗ್ಯದ ಶೈಲಿಯಲ್ಲಿ ಈ ಕತೆಗಳು ಕಟ್ಟಿಕೊಟ್ಟಿವೆ ಎಂದು ತೀರ್ಪುಗಾರರು ವಿಶ್ಲೇಷಿಸಿದ್ದಾರೆ.
ಹದಿಮೂರು ಕೃತಿಗಳು ಬುಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿವೆ. 50 ಸಾವಿರ ಪೌಂಡ್ (₹55 ಲಕ್ಷಕ್ಕೂ ಹೆಚ್ಚು) ಮೊತ್ತದ ಬಹುಮಾನದ ಈ ಪ್ರಶಸ್ತಿಯ 'ಲಾಂಗ್ ಲಿಸ್ಟ್'ಗೆ ಇದೇ ಮೊದಲ ಬಾರಿಗೆ ಕನ್ನಡದಿಂದ ಅನುವಾದಗೊಂಡ ಕೃತಿಯು ಆಯ್ಕೆಯಾಗಿದೆ.
ಈ ಪಟ್ಟಿಯಲ್ಲಿನ ಹದಿಮೂರು ಕೃತಿಗಳಲ್ಲಿ ಆರು ಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲಿವೆ. ಅವುಗಳಲ್ಲಿ ಒಂದು ಏಪ್ರಿಲ್ 8ರಂದು ಬಹುಮಾನಕ್ಕೆ ಆಯ್ಕೆಗೊಳ್ಳಲಿದೆ.