HEALTH TIPS

ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೆಂತಾಮರನನ್ನು ಪೋಲೀಸರು ಬಂಧಿಸಲು ಸಾಧ್ಯವಿಲ್ಲ, ಪತ್ತನಂತಿಟ್ಟ ಬಾರ್‍ನಲ್ಲಿ ಗಲಾಟೆ ಮಾಡಿದವರಲ್ಲಿ ವಿವಾಹ ತಂಡದ ಸದಸ್ಯರೂ ಸೇರಿದ್ದರು: ಮುಖ್ಯಮಂತ್ರಿ ಸಮರ್ಥನೆ

ತಿರುವನಂತಪುರಂ: ಪತ್ತನಂತಿಟ್ಟದಲ್ಲಿ ನಡೆದ ನೆನ್ಮಾರ ಜೋಡಿ ಕೊಲೆ ಮತ್ತು ಮದುವೆ ಪಾರ್ಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಪೋಲೀಸರನ್ನು ಸಂಪೂರ್ಣವಾಗಿ ತಳ್ಳಿಹಾಕದೆ ಬೆಂಬಲಕ್ಕೆ ನಿಂತು ಮಾತನಾಡಿರುವರು. 

ನೆನ್ಮಾರ ಘಟನೆಯನ್ನು ಉಲ್ಲೇಖಿಸಿ ಪಿಣರಾಯಿ ವಿಜಯನ್, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೆಂದಾಮರ  ಅವರನ್ನು ಬಂಧಿಸುವ ಅಧಿಕಾರ ಪೋಲೀಸರಿಗೆ ಇಲ್ಲ ಎಂದು ಹೇಳಿದರು. ಪತ್ತನಂತಿಟ್ಟದ ಬಾರ್‍ನಲ್ಲಿ ಗದ್ದಲ ಸೃಷ್ಟಿಸಿದವರಲ್ಲಿ ಕೆಲವು ಮದುವೆ ತಂಡದ ಸದಸ್ಯರು ಸೇರಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಈ ಮಧ್ಯೆ, ಕಾಪ್ಪಾ ಪ್ರಕರಣವು ಆರೋಪಿಗಳು ಸೇರಿದಂತೆ ಸಚಿವರಿಗೆ ಹಾರ ಹಾಕುವ ಹಂತಕ್ಕೆ ತಲುಪಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ವಿರೋಧ ಪಕ್ಷವು ವಿಧಾನಸಭೆಯಲ್ಲಿ ಹೇಳಿದೆ.


ಕೊಲೆ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಚೆಂತಾಮರ ನೆನ್ಮಾರದಲ್ಲಿ ಮಾಡಿದ ಜೋಡಿ ಕೊಲೆ ಮತ್ತು ಪತ್ತನಂತಿಟ್ಟದಲ್ಲಿ ಮದುವೆ ಪಾರ್ಟಿಯ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯನ್ನು ಉಲ್ಲೇಖಿಸಿ ವಿರೋಧ ಪಕ್ಷ ತುರ್ತು ನಿರ್ಣಯದ ನೋಟಿಸ್ ನೀಡಿತ್ತು.  ಚೆಂತಾಮರ ವಿರುದ್ಧ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಬೆದರಿಕೆ ಹಾಕಿದ್ದಕ್ಕಾಗಿ ದೂರು ದಾಖಲಾಗಿದ್ದರೂ ಪೋಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರತಿಪಕ್ಷಗಳು ಹೇಳಿದಾಗ, ಮುಖ್ಯಮಂತ್ರಿಗಳ ಪ್ರತಿಕ್ರಿಯೆ ನೀಡಿದರು. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೋಲೀಸರು ಚೆಂತಾಮರ ನನ್ನು ಬಂಧಿಸಲು ಸಾಧ್ಯವಿಲ್ಲ. ಆದರೆ, ಚೆಂತಾಮರ ವಿರುದ್ಧ ಮೃತ ಸುಧಾಕರನ್ ಅವರ ಮಕ್ಕಳು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಪೋಲೀಸರು ವಿಫಲರಾಗಿದ್ದಾರೆ. ಪತ್ತನಂತಿಟ್ಟ ಘಟನೆಯಲ್ಲಿ ಮದುವೆ ತಂಡದ ಮೇಲೆ ಥಳಿಸಿದ್ದಕ್ಕಾಗಿ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರತ್ಯೇಕ ಘಟನೆಗೆ ಪೋಲೀಸರನ್ನು ಟೀಕಿಸಬಾರದು ಎಂದು ಮುಖ್ಯಮಂತ್ರಿ ಹೇಳಿದರು.

ಆದರೆ, ಸಿಪಿಎಂ ಸಭೆಗಳಂತೆ ರಾಜ್ಯದಲ್ಲಿ ಗೂಂಡಾಗಳ ಸಭೆಗಳು ಸಹ ನಡೆಯುತ್ತಿವೆ ಎಂದು ಪ್ರತಿಪಕ್ಷಗಳು ತಿಳಿಸಿವೆ. ಪತ್ತನಂತಿಟ್ಟದಲ್ಲಿ ಕಾಪ್ಪಾ ಪ್ರಕರಣದ ಆರೋಪಿಗಳನ್ನು ಹಾರ ಹಾಕಿ ಸ್ವಾಗತಿಸಿದವರು ಆರೋಗ್ಯ ಸಚಿವರು ಎಂದು ವಿ.ಡಿ. ಸತೀಶನ್ ಹೇಳಿದರು. ಭಾಷಣದ ಸಮಯದಲ್ಲಿ, ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಹಲವಾರು ಬಾರಿ ಮಾತಿನ ಚಕಮಕಿ ನಡೆಯಿತು. ಎನ್ ಶಂಸುದ್ದೀನ್ ಅವರ ತುರ್ತು ಗೊತ್ತುವಳಿ ತಿರಸ್ಕøತಗೊಂಡ ನಂತರ ವಿರೋಧ ಪಕ್ಷವು ಸಭಾತ್ಯಾಗ ಮಾಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries