HEALTH TIPS

ಇಸ್ರೊ: ನ್ಯಾವಿಗೇಷನ್‌ ಉಪಗ್ರಹದಲ್ಲಿ ತಾಂತ್ರಿಕ ಲೋಪ

Top Post Ad

Click to join Samarasasudhi Official Whatsapp Group

Qries

ನವದೆಹಲಿ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ)ಉಡಾಯಿಸಿದ್ದ 'ನ್ಯಾವಿಗೇಷನ್‌ ಉಪಗ್ರಹ'ದಲ್ಲಿ (ಎನ್‌ವಿಎಸ್‌-02) ಭಾನುವಾರ ತಾಂತ್ರಿಕ ಲೋಪ ಎದುರಾಗಿದೆ.

ಜನವರಿ 29ರಂದು ಇಸ್ರೊ, ಈ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್‌15 ರಾಕೆಟ್ ಮೂಲಕ ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.

'ಉಪಗ್ರಹವನ್ನು ನಿಗದಿತ ಕಕ್ಷೆಯ ಸ್ಲಾಟ್‌ನಲ್ಲಿ ಇರಿಸುವ ಕಾರ್ಯ ತಾಂತ್ರಿಕ ಕಾರಣಗಳಿಂದ ನೆರವೇರಿಲ್ಲ. ಆ ನಿಟ್ಟಿನಲ್ಲಿ ಯತ್ನಗಳು ನಡೆದಿವೆ' ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಎನ್‌ವಿಎಸ್‌-02 ಅನ್ನು ಭಾರತದ ಮೇಲೆ ಗೊತ್ತುಪಡಿಸಿದ ಭೂಸ್ಥಿರ ಕಕ್ಷೆಯಲ್ಲಿ ಇರಿಸಲಾಗಿದೆ. ಆದರೆ, ಅದರ 'ಲಿಕ್ವಿಡ್‌ ಎಂಜಿನ್‌' ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಅದನ್ನು ಗೊತ್ತುಪಡಿಸಿದ ಕಕ್ಷೆಗೆ ಕಳುಹಿಸುವ ಯತ್ನ ವಿಳಂಬವಾಗುತ್ತದೆ ಅಥವಾ ಆ ಕಾರ್ಯವನ್ನು ಪೂರ್ಣವಾಗಿ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಉಪಗ್ರಹವು ಪ್ರಸ್ತುತ ದೀರ್ಘವೃತ್ತಾಕಾರ ಕಕ್ಷೆಯಲ್ಲಿದೆ. ಇಂತಹ ಕಕ್ಷೆಯಲ್ಲಿ ಇರುವ ಉಪಗ್ರಹವನ್ನು ನ್ಯಾವಿಗೇಷನ್‌ಗಾಗಿ ಬಳಸಿಕೊಳ್ಳಲು ಅಗತ್ಯವಿರುವ ಪರ್ಯಾಯ ತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಇಸ್ರೊ ಹೇಳಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries