ಉಪ್ಪಳ : ಉಪ್ಪಳ ಮೀನು ಮಾರುಕಟ್ಟೆ ಸಮೀಪ ಕಟ್ಟಡದ ಕಾವಲುಗಾರನನ್ನು ಚಾಕುವಿನಿಂದ ಇರಿದು ಹತ್ಯೆಗ್ಯೆದ ಪ್ರಕರಣದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಕೊನೆಗೂ ಇಂದು ಬಂಧಿಸಿದ್ದಾರೆ.
ಉಪ್ಪಳ, ಪತ್ವಾಡಿ ನಿವಾಸಿ ಸವಾದ್ (24) ಬಂಧಿತ ಆರೋಪಿ.ಇನ್ಸ್‌ಪೆಕ್ಟರ್ ಇ. ಅನೂಪ್ ಕುಮಾರ್ ಮತ್ತು ತಂಡ ಬಂಧಿಸಿದ್ದಾರೆ.
ಮಂಗಳವಾರ ಸುರೇಶ್ (45) ಎಂಬವರನ್ನು ಮಂಗಳವಾರ ರಾತ್ರಿ ಕೊಲೆಗ್ಯೆದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಮೃತ ಸುರೇಶ್ ಕಳೆದ ಎರಡು ವರ್ಷಗಳಿಂದ ಉಪ್ಪಳದ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ಪಾನ ಸ್ನೇಹಿತರಾಗಿದ್ದು, ಮಂಗಳವಾರ ರಾತ್ರಿ ಇಬ್ಬರೂ ಕಟ್ಟಡದ ಬಳಿ ಮದ್ಯ ಸೇವಿಸಿದ್ದರು.ಈ ವೇಳೆ ವಾಗ್ವಾದ ನಡೆದಿದೆ. ಅಸಭ್ಯ ಮಾತುಗಳು ನುಸುಳಿಕೊಂಡು ಇಬ್ಬರೂ ಕ್ಯೆ ಮಿಸಲಾಯಿಸಿದರು. ಈ ಮಧ್ಯೆ ಸವಾದ್ ಸಿಟ್ಟಿನಿಂದ ಚಾಕುವಿನಿಂದ ಇರಿದನು ಎಂದು ಆರೋಪಿ ಹೇಳಿದ್ದಾನೆ.ಹತ್ಯೆ ನಡೆದ ತಕ್ಷಣ ಸವಾದ್ ಸ್ಥಳದಲ್ಲಿಯೇ ಒಂದಷ್ಟು ಹೊತ್ತು ನಿಂತು ಬಳಿಕ ಪರಾರಿಯಾದನು. ಇನ್ನಷ್ಟು ತನಿಖೆಯಿಂದ ವಿಷಯಗಳು ಹೊರಬರಲಿದ್ದು, ತನಿಖೆ ಪ್ರಗತಿಯಲ್ಲಿದೆ.
ಜಿಲ್ಲಾ ಪೊಲೀಸ್ ಮುಖ್ಯಸ್ಥೆ ಡಿ.ಶಿಲ್ಪಾ ನಿರ್ದೇಶನದಂತೆ ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ನೇತೃತ್ವದಲ್ಲಿ ರಚಿಸಲಾಗಿದ್ದ ಮೂರು ಸ್ಕ್ವಾಡ್ ಗಳು ನಡೆಸಿದ ತನಿಖೆಯಲ್ಲಿ 24 ಗಂಟೆಯೊಳಗೆ ಸವಾದ್ ನನ್ನು ಬಂಧಿಸಲಾಗಿದೆ.
ಕರ್ನಾಟಕಕ್ಕೆ ಪಲಾಯನಗ್ಯೆದ್ದಿರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಅನುಸರಿಸಿ ತನಿಖಾ ತಂಡಗಳು ಕರ್ನಾಟಕದಲ್ಲಿ ಮತ್ತೊಂದು ತಂಡ
ಸವಾದ್ ಅವರ ಸಂಬಂಧಿಕರ ಮನೆಯೂ ಕೇಂದ್ರೀಕರಿಸಿ ತನಿಖೆ ನಡೆಸಿತ್ತು. ನಡುವೆ ಬುಧವಾರ ರಾತ್ರಿ ಸವಾದ್ ಮಂಜೇಶ್ವರದ ಸಂಬಂಧಿಕರ ಮನೆಗೆ ಬರುವ ಬಗ್ಗೆ ಮಾಹಿತಿ ತಿಳಿದು ಪೊಲೀಸರಿಗೆ ಲಭಿಸಿತ್ತು. ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸೆರೆಹಿಡಿದರು.
ಎಸ್ ಐಗಳಾದ ಕೆ.ಜಿ ರಮೇಶ್, ಕೆ.ಆರ್.ಉಮೇಶ್, ಮನು ಕೃಷ್ಣನ್, ಎ.ಎಸ್ ಐಗಳಾದ ಅತುಲ್ ರಾಮ್, ಮಧು, ಸಿಪಿಒ ಮಾರಯ್ಯ ಧನೇಶ್, ಅಬ್ದುಲ್ ಸಲಾಂ, ಸಂದೀಪ್, ಪ್ರಮೋದ್,ಸಜಿತ್ ಮತ್ತು ವಿಜಿನ್ ತಂಡದಲ್ಲಿದ್ದರು.