ಕುಂಬಳೆ: ಕೊಕ್ಕೆಜಾಲು ಉಮರಲಿ ಶಿಹಾಬ್ ತಂಙಳ್ ವಾಫಿ ಕಾಲೇಜಿನ 13ನೇ ವಾರ್ಷಿಕೋತ್ಸವ ಮತ್ತು ಪ್ರಥಮ ಸನದುದಾನ ಸಮ್ಮೇಳನ ಭಾನುವಾರ ಮುಕ್ತಾಯಗೊಂಡಿತು.
ಮಮ್ಮುಂಜಿ ಹಾಜಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯೂಸುಫ್ ಸೆಂಚುರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮವನ್ನು ಎಸ್‍ವೈಎಸ್ ಮಲಪ್ಪುರಂ ಜಿಲ್ಲಾ ಉಪಾಧ್ಯಕ್ಷ ಬಿಎಸ್‍ಕೆ ತಂಙಳ್ ಉದ್ಘಾಟಿಸಿದರು. ಸಿಐಸಿ ಪ್ರಧಾನ ಕಾರ್ಯದರ್ಶಿ ಹಕೀಮ್ ಫೈಝಿ ಅದ್ರಿಸ್ಸೇರಿ ಸನದುದಾನ ಭಾಷಣ ಮಾಡಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್,ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿದ್ದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ತರಬೇತಿ ಪಡೆದ ಸೇವಾ ಮನೋಭಾವದ ವ್ಯಕ್ತಿಗಳ ಪೀಳಿಗೆಯನ್ನು ರೂಪಿಸುವ ಸಮಾಜವನ್ನು ಸೃಷ್ಟಿಸುವುದು ಶಿಕ್ಷಣದ ಗುರಿಯಾಗಿದೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು. ಜನರಲ್ಲಿ ಶಿಸ್ತುಬದ್ಧ, ಆದರ್ಶವಾದಿ, ಶುದ್ಧ, ಸಮರ್ಪಿತ ಮತ್ತು ಸ್ವಾವಲಂಬಿ ಸಂಸ್ಕøತಿಯನ್ನು ಬೆಳೆಸಿಕೊಳ್ಳಬಹುದು ಮತ್ತು ನಮ್ಮ ಸಂಪ್ರದಾಯ, ಪರಂಪರೆ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನದ ರಕ್ಷಕರಾಗುವಲ್ಲಿ ಯುವ ಸಮಾಜ ಮಹತ್ತರ ಪಾತ್ರ ವಹಿಸಬೇಕು ಎಂದರು.
ಸಿಐಸಿ ಕಾರ್ಯ ಕಾರ್ಯದರ್ಶಿ ಅಬ್ದುಲ್ ಬಾರ್ ವಾಫಿ, ಕಲ್ಲಟ್ರ ಮಾಹಿನ್ ಹಾಜಿ, ಮುನೀರ್ ಹಾಜಿ ಕಂಬಾರ್, ಕರೀಂ ಸಿಟಿಗೋಲ್ಡ್, ಯು.ಕೆ. ಯೂಸುಫ್, ಮಾಹಿನ್ ಕೇಳೋಟ್, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರೆಹಮಾನ್, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ.ಬಿ. ಹನೀಫ್, ಮೂಸಾ ಹಾಜಿ ಬಂದ್ಯೋಡು, ಪಿ.ಎಂ. ಸಲೀಂ, ಸಲಾಂ ಹಾಜಿ, ಯು.ಕೆ. ಅಶ್ರಫ್, ಫೈನ್ ಗೋಲ್ಡ್ ಯೂಸುಫ್ ಹಾಜಿ, ಅಬ್ದುಲ್ ಖಾದರ್ ಫೈಸಿ, ಸಲಾಂ ಹಾಜಿ ವೆಲ್ಪೇರ್, ಇಬ್ರಾಹಿಂ ಡ್ರೀಮ್ ಪಾಯಿಂಟ್, ಅಜೀಜ್ ಹಾಜಿ ಪೆರಿಂಗಡಿ, ಅಜೀಜ್ ಪೊಯ್ಯೆ, ಅಬೂಬಕರ್ ಬಾಯಾರ್, ಅಬ್ಬಾಸ್ ಅಪ್ಸರಾ, ಶಿಹಾಬ್ ಸಲ್ಮಾನ್, ಮಾಸ್ಟರ್ ಮೂಸಾ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಕಬೀರ್ ಹುದವಿ ಸ್ವಾಗತಿಸಿ, ಹಾಫಿಝ್ ಶಬೀರ್ ಪಾರಾಯಣ ನಡೆಸಿಕೊಟ್ಟರು. ಕಾರ್ಯಕ್ರಮದ ಭಾಗವಾಗಿ, ವಿದ್ಯಾರ್ಥಿಗಳು ಆಯೋಜಿಸಿದ್ದ ಎಕ್ಸ್ ಪೋದಲ್ಲಿ ಸಂದರ್ಶಕರಿಗೆ ಕುರಾನ್ ಅನ್ನು ಪರಿಚಯಿಸಲಾಯಿತು, ಮತ್ತು ವಿವಿಧ ಎಐ ಮಾದರಿಗಳನ್ನು ಬ್ರೈಲ್ ಲಿಪಿಯಲ್ಲಿ ಪ್ರದರ್ಶಿಸಲಾಯಿತು ಮತ್ತು ವಿವರಿಸಲಾಯಿತು.