ಮಾಸ್ಕೊ: ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 'ಅಗತ್ಯ ಎನಿಸಿದರೆ' ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜತೆ ಮಾತುಕತೆಗೆ ಸಿದ್ದರಿದ್ದಾರೆ ಎಂದು ರಷ್ಯಾ ಮಂಗಳವಾರ ಹೇಳಿದೆ.
'ಅಧ್ಯಕ್ಷ ಪುಟಿನ್ ಅವರು ಶಾಂತಿ ಮಾತುಕತೆಗೆ ತಾವು ಸಿದ್ಧ ಎಂಬ ಮಾತನ್ನು ಮೊದಲಿನಿಂದಲೂ ಪುನರಾವರ್ತಿಸುತ್ತಾ ಬಂದಿದ್ದಾರೆ' ಎಂದು ರಷ್ಯಾದ ಅಧ್ಯಕ್ಷರ ಕಚೇರಿಯ ವಕ್ತಾರ ದಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ತಿಳಿಸಿದರು.
'ನಮ್ಮ ಗುರಿಗಳನ್ನು ಸಾಧಿಸುವುದು ಮುಖ್ಯವಾಗಿದೆ ಮತ್ತು ಗುರಿಗಳನ್ನು ಈಡೇರಿಸಲು ಶಾಂತಿಯುತ ಮಾರ್ಗಗಳನ್ನು ಬಯಸುತ್ತೇವೆ' ಎಂದು ಹೇಳಿದರು.
ಆದರೆ ಪುಟಿನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಣ ಮಾತುಕತೆಯ ಬಗ್ಗೆ ಈಗಲೇ ಏನನ್ನೂ ಹೇಳಲಾಗದು ಎಂದು ಅವರು ಸ್ಪಷ್ಟಪಡಿಸಿದರು.