ಹೊಸೂರು: ಕೇರಳ ಮತ್ತು ತಮಿಳುನಾಡಿನಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾವೋವಾದಿ ಭಯೋತ್ಪಾದಕ ಸಂತೋಷ್‌ನನ್ನು ಬಂಧಿಸಲಾಗಿದೆ. ಕೇರಳದ ಎಟಿಎಸ್ ತಂಡವು ಆತನನ್ನು ತಮಿಳುನಾಡಿನ ಹೊಸೂರಿನಲ್ಲಿ ಬಂಧಿಸಿದೆ.
ವಯನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾವೋವಾದಿ ಚಟುವಟಿಕೆಗಳಲ್ಲಿ ಸಂತೋಷ್ ಕೊನೆಯ ಕೊಂಡಿಯಾಗಿದ್ದ.ಪೊಲ್ಲಾಚಿ ಮೂಲದ ಸಂತೋಷ್, ಕೇರಳ ಮತ್ತು ತಮಿಳುನಾಡಿನಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ವಯನಾಡಿನ ಮಕ್ಕಿಮಲದಲ್ಲಿ ನೆಲಬಾಂಬ್ ಇರಿಸುವಲ್ಲಿ ಸಂತೋಷ್ ಭಾಗಿಯಾಗಿರುವುದು ಪತ್ತೆಯಾಗಿದೆ. ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಕಬನಿ ದಳದ ಮುಖಂಡನೂ ಈತನಾಗಿದ್ದಾನೆ.
ಇದಕ್ಕೂ ಮೊದಲು, ಎಟಿಎಸ್ ಕೇರಳದ ವಿವಿಧ ಸ್ಥಳಗಳಿಂದ ಸಿಪಿ ಮೊಯ್ದೀನ್ ಮತ್ತು ಮನೋಜ್ ಅವರನ್ನು ಬಂಧಿಸಿತ್ತು. ಇದರ ನಂತರ, ಸಂತೋಷ್, ವಿಕ್ರಮ್ ಗೌಡ ಜೊತೆ ಕರ್ನಾಟಕ ಅರಣ್ಯ ಪ್ರದೇಶಕ್ಕೆ ತೆರಳಿದ್ದ.
ಸಂತೋಷ್‌ಗಾಗಿ ಎಟಿಎಸ್ ಮತ್ತು ತಮಿಳುನಾಡು ಪೊಲೀಸರು ಬಲೆ ಬೀಸಿ ಕಾಯುತ್ತಿದ್ದರು. ಏತನ್ಮಧ್ಯೆ, ಸಂತೋಷ್ ನನ್ನು ಕೇರಳದ ಎಟಿಎಸ್ ತಂಡವು ಹೊಸೂರಿನಲ್ಲಿ ಬಂಧಿಸಿದೆ.