ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಅನ್ನೋ ಮಾತಿನಂತೆ ನೇಮಕಾತಿ ಸಂದರ್ಶನದ ವೇಳೆ ಅಭ್ಯರ್ಥಿಗಳು ತಕ್ಕ ಸಮಯಕ್ಕೆ ಹಾಜರಾಗುತ್ತಾರೆ. ಈ ಮೂಲಕ ಸಮಯ ಪಾಲನೆಯಲ್ಲಿ ತಾನು ಪಕ್ಕಾ ಎಂದು ತೋರಿಸಿಕೊಳ್ಳುತ್ತಾರೆ. ಇನ್ನು ಉಡುಗೆ ತೊಡುಗೆಯಲ್ಲೂ ತೀವ್ರ ಮುತುವರ್ಜಿ ವಹಿಸುತ್ತಾರೆ.
ಕಾರಣ ಮೊದಲ ನೋಟದಲ್ಲೇ ಇಂಪ್ರೆಸ್ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. ಹೀಗೆ ಸಂದರ್ಶನಕ್ಕೆ ಮಹಿಳೆಯೊಬ್ಬರಿಗೆ ಕರೆ ಬಂದಿದೆ. ಹೇಳಿದ ಸಮಯಕ್ಕೆ ಮಹಿಳೆ ಹಾಜರಾಗಿದ್ದಾರೆ. ಆದರೆ ಸಂದರ್ಶನಕ್ಕೆ ಕರೆದ ಬಾಸ್ ಬಂದೇ ಇಲ್ಲ. ಬರೋಬ್ಬರಿ 45 ನಿಮಿಷ ತಡ ಮಾಡಿದ್ದಾರೆ. ಇದು ಮಹಿಳೆಯನ್ನು ರೊಚ್ಚಿಗೇಳುವಂತೆ ಮಾಡಿದೆ. ಸಂದರ್ಶನ ಮುಗಿಸಿ ಬಂದ ಮರುದಿನ ಮಹಿಳೆಗೆ ಉದ್ಯೋಗಕ್ಕೆ ಆಯ್ಕೆಯಾಗಿರುವ ಆಫರ್ ಲೆಟರ್ ಬಂದಿದೆ. ಆದರೆ ಮಹಿಳೆ ತೆಗೆದುಕೊಂಡ ನಿರ್ಧಾರ ಎಲ್ಲರನ್ನು ಅಚ್ಚರಿಗೊಳಿಸಿದೆ.
ನಿಕೋಲೆ ಅನ್ನೋ ಮಹಿಳಾ ಅಭ್ಯರ್ಥಿ ಈ ಕುರಿತು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಭಾರಿ ಚರ್ಚೆಯಾಗುತ್ತಿದೆ. ನಿಕೋಲೆ ಉದ್ಯೋಗಕ್ಕಾಗಿ ಹಲವು ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಿದ್ದಾಳೆ. ಈಕೆಯ ರೆಸ್ಯೂಮ್ ನೋಡಿ ಕಂಪನಿಯೊಂದು ನೇಮಕಾತಿ ಸಂದರ್ಶನಕ್ಕೆ ಬರುವಂತೆ ಸೂಚಿಸಿದೆ. ಸಂದರ್ಶನದ ಕುರಿತು ದಿನಾಂಕ, ಸಮಯವನ್ನು ಕಂಪನಿ ಇಮೇಲ್ ಮಾಡಿದೆ.
ಕಂಪನಿಯ ಬಾಸ್ ಹೇಳಿದ ಸಮಯಕ್ಕೆ, ದಿನಾಂಕದಂದು ನಿಕೋಲೆ ಸಂದರ್ಶನಕ್ಕೆ ಹಾಜರಾಗಿದ್ದಾಳೆ. ಆದರೆ ಸಂದರ್ಶನಕ್ಕೆ ಕರೆದ ಕಂಪನಿ ಬಾಸ್ ಬಂದೇ ಇಲ್ಲ. 10 ನಿಮಿಷ, 20 ನಿಮಿಷ ದಾಟಿತು. ಹೀಗೆ 45 ನಿಮಿಷಗಳ ಕಾಲ ಮಹಿಳೆ ಕಾದಿದ್ದಾರೆ. 45 ನಿಮಿಷ ತಡವಾಗಿ ಕಂಪನಿ ಬಾಸ್ ಆಗಮಿಸಿದ್ದಾರೆ. ಬಳಿಕ ಸಂದರ್ಶನಕ್ಕೆ ಮಹಿಳೆಯನ್ನು ಕರೆದಿದ್ದಾರೆ. ಕೆಲ ಹೊತ್ತುಗಳ ಕಾಲ ಸಂದರ್ಶನ ನಡೆದಿದೆ. ಕೇಳಿದ ಪ್ರಶ್ನೆಗಳು, ಸವಾಲುಗಳನ್ನು ಮಹಿಳೆ ಯಶಸ್ವಿಯಾಗಿ ನಿಭಾಯಿಸಿದ್ದಾಳೆ.ನಿಕೋಲೆ ಉತ್ತರಕ್ಕೆ ಕಂಪನಿ ಬಾಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂದರ್ಶನ ಮುಗಿಸಿ ನಿಕೋಲೆ ಮನೆಗೆ ಮರಳಿದ್ದಾರೆ.
ಮರು ದಿನ ನಿಕೋಲೋಗೆ ಕಂಪನಿಯಿಂದ ಜಾಬ್ ಆಫರ್ ಲೆಟರ್ ಇಮೇಲ್ ಮಾಡಿದ್ದಾರೆ. ಉತ್ತಮ ವೇತನ ಆಫರ್ ಮಾಡಲಾಗಿತ್ತು. ಆದರೆ ಈ ಜಾಬ್ ಆಫರ್ ಲೆಟರ್ ಇಮೇಲ್‌ಗೆ ನಿಕೋಲೆ ತಕ್ಕ ತಿರುಗೇಟು ನೀಡಿದ್ದಾಳೆ. ಈಕೆ ಈ ಉದ್ಯೋಗವನ್ನು ತರಿಸ್ಕರಿಸುವುದಾಗಿ ಇಮೇಲ್ ಮಾಡಿದ್ದಾಳೆ. ಇದಕ್ಕೆ ಕೊಟ್ಟ ಕಾರಣ. ಸಮಯ ಪಾಲನೆ ಮಾಡದ ನಾಲಾಯಕ್ ಬಾಸ್ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾಳೆ.
ನಿಮ್ಮ ಸ್ಪಂದನೆಗೆ ಧನ್ಯವಾದ. ನನಗೆ ಉದ್ಯೋಗ ಆಫರ್ ನೀಡಿರುವುದನ್ನು ಗೌರವಿಸುತ್ತೇನೆ. ಆದರೆ ಈ ಉದ್ಯೋಗ ಆಫರ್‌ನ್ನು ನಾನು ತಿರಸ್ಕರಿಸುತ್ತೇನೆ. ಈ ರೀತಿ ಹೇಳಲು ನನಗೆ ನೋವಾಗುತ್ತಿದೆ. ಆದರೆ ಬೇರೆ ಮಾರ್ಗವಿಲ್ಲ. ನಿನ್ನೆ ನಮ್ಮ ಭೇಟಿ ನನ್ನ ನಿರೀಕ್ಷೆಯನ್ನು ತೆಲೆಕೆಳಗೆ ಮಾಡಿದೆ. ಕಾರಣ ನಿಮ್ಮಿಂದ ಕನಿಷ್ಠ ಸಮಯ ಪಾಲನೆ ನಿರೀಕ್ಷೆ ಮಾಡಿದ್ದೆ. ಆದರೆ ಬರೋಬ್ಬರಿ 45 ನಿಮಿಷಗಳ ಕಾಲ ತಡ ಮಾಡಿದ್ದೀರಿ. ಕೇವಲ ವಿಳಂಬ ಮಾತ್ರವಲ್ಲ, ಈ ಕುರಿತು ಯಾವುದೇ ಪಶ್ಚಾಪ ಅಥವಾ ತಪ್ಪು ಭಾವನೆ ನಿಮ್ಮಲ್ಲಿ ಇರಲಿಲ್ಲ. ನಮ್ಮ ಸಮಯಕ್ಕೆ ಬೆಲೆ ಕೊಡಲು ನಿಮಗೆ ಸಾಧ್ಯವಾಗಿಲ್ಲ. ನಿಮ್ಮಲ್ಲಿ ನನಗೆ ಬಾಸ್ ಗುಣ ಯಾವುದೂ ಕಾಣಲಿಲ್ಲ. ಈ ಉದ್ಯೋಗ ಆಫರ್ ತಿರಸ್ಕರಿಸುತ್ತಿದ್ದೇನೆ ಎಂದು ನಿಕೋಲೆ ತಮಗೆ ಬಂದ ಕಂಪನಿಯ ಇಮೇಲ್‌ಗೆ ಪ್ರತಿಕ್ರಿಯಿಸಿದ್ದಾರೆ.
ಇದೀಗ ಈ ಇಮೇಲ್ ಕುರಿತು ಭಾರಿ ಚರ್ಚೆಯಾಗುತ್ತಿದೆ. ಕಂಪನಿ ಬಾಸ್, ಮ್ಯಾನೇಜರ್ ಮಟ್ಟದ ಹಲವರು ಪ್ರತಿಕ್ರಿಯಿಸಿದ್ದಾರೆ. ಇತ್ತ ಹಲವು ಉದ್ಯೋಗಿಗಳು ಈ ಇಮೇಲ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸಂದರ್ಶನದ ವೇಳೆ ಹಲವರು ಕೆಲಸಕ್ಕೆ ಬೇಕಾದ ಕೌಶಲ್ಯ, ಅನುಭವದ ಕುರಿತು ಪ್ರಶ್ನೆ ಕೇಳುವ ಬದಲು ಅಸಂಬದ್ಧ ಪ್ರಶ್ನೆ ಕೇಳಿ ಅದರ ಮೇಲೆ ಉದ್ಯೋಗ ನಿರ್ಧರಿಸುತ್ತಾರೆ. ಸಮಯ ಪಾಲನೆ ಮಾಡದ ಬಾಸ್ ನಾಲಯಕ್ಕು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೆ ಒಂದಷ್ಟು ಮಂದಿ, ಮಹಿಳೆಗೆ ಬೇರೆ ಜಾಬ್ ಆಫರ್ ಸಿಕ್ಕಿರುವ ಸಾಧ್ಯತೆ ಇದೆ. ಹೀಗಾಗಿ ಧೈರ್ಯವಾಗಿ ಹೇಳಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.