ಢಾಕಾ: ಸ್ಟಾರ್‌ಲಿಂಕ್ ಸ್ಯಾಟಲೈಟ್ ಹಾಗೂ ಇನ್‌ಟರ್‌ನೆಟ್ ಸೇವೆಯನ್ನು ಪ್ರಾರಂಭಿಸಲು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್‌ಗೆ ಬಾಂಗ್ಲಾದೇಶದಿಂದ ಆಹ್ವಾನ ಬಂದಿದೆ.
ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಮಸ್ಕ್ ಅವರಿಗೆ ಆಹ್ವಾನ ನೀಡಿದ್ದು ಬಾಂಗ್ಲಾದೇಶದ ಯುವ ಸಮುದಾಯದೊಂದಿಗೆ ಚರ್ಚಿಸುವಂತೆ ಮನವಿ ಪತ್ರ ರವಾನಿಸಿದ್ದಾರೆ.
ಈ ಕುರಿತು ಕಳೆದ ಫೆ.19ರಂದೇ ಎಲಾನ್ ಮಸ್ಕ್ ಅವರಿಗೆ ಪತ್ರ ಬರೆದಿರುವ ಮುಹಮ್ಮದ್ ಯೂನಸ್ ಬಾಂಗ್ಲಾದೇಶಕ್ಕೆ ಬನ್ನಿ ಎಂದಿದ್ದಾರೆ . ಯೂನಸ್ ಮನವಿಯನ್ನು ಪುರಸ್ಕರಿಸಿರುವ ಎಲಾನ್ ಮಸ್ಕ್ "ಬಾಂಗ್ಲಾದೇಶಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ.." ಎಂದು ಹೇಳಿದ್ದಾರೆ.
ಅದಲ್ಲದೇ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯ ಮೂಲಕ ಬಾಂಗ್ಲಾದೇಶಕ್ಕೆ ಆರ್ಥಿಕ ಶಕ್ತಿ ಒದಗಸುವ ಸಾಧ್ಯತೆ ಇದ್ದು, ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅದಲ್ಲದೆ ಡಿಜಿಟಲ್ ಕ್ಷೇತ್ರದಲ್ಲೂ ಹೊಸ ಹೊಸ ಸಾಧ್ಯತೆಗಳನ್ನು ಸ್ಟಾರ್‌ಲಿಂಕ್ ಸ್ಯಾಟಲೈಟ್ ಸೇವೆ ಸಾಕಾರಗೊಳಿಸಲಿದೆ" ಎಂದು ಮಸ್ಕ್ ಹೇಳಿದ್ದಾರೆ.