ಇಡುಕ್ಕಿ: ಕಾಡಾನೆ ದಾಳಿಗೆ ಗೃಹಿಣಿ ಬಲಿಯಾಗಿದ್ದಾರೆ. ಪೆರುವಂತನಂ ಬಳಿಯ ಕೊಂಬನ್ಪಾರದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ನೆಲ್ಲಿವಿಲಾ ಪುತೇನ್ ನಿವಾಸಿ ಸೋಫಿಯಾ ಇಸ್ಮಾಯಿಲ್ (45) ಎಂದು ಗುರುತಿಸಲಾಗಿದೆ. ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಟಿಆರ್ & ಟಿ ಎಸ್ಟೇಟ್‍ನಲ್ಲಿ ಈ ದಾಳಿ ನಡೆದಿದೆ.
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಕಾಡಾನೆ ಮಹಿಳೆಯ ಮೇಲೆ ದಾಳಿ ಮಾಡಿದೆ. ಅವರು ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಈ ದಾಳಿ ಸಂಭವಿಸಿದೆ.
ಘಟನಾ ಸ್ಥಳದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯ ಮುಖಂಡರು ಮತ್ತು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರು.