ಮುಳ್ಳೇರಿಯ: ಜಾಂಬ್ರಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಐದನೇ ದಿನವಾದ ಗುರುವಾರ ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆಯಲ್ಲಿ ವಿದುಷಿ ಶಾರದಾ ಮಣಿಶೇಖರ್ ಇವರ ಶಿμÉ್ಯ ನಾಟ್ಯ ವಿದುಷಿ ಅಂಕಿತಾ ಬದಿಯಡ್ಕ ಅವರ ತಪಸ್ಯ ನಾಟ್ಯಾಲಯದ ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
ನಟುವಾಂಗದಲ್ಲಿ ವಿದುಷಿ ಶಾರದಾ ಮಣಿಶೇಖರ್, ಹಾಡುಗಾರಿಕೆ ಶರತ್ ಕುಮಾರ್, ಕೊಳಲು ಮೇಧಾ ಉಡುಪ, ಮೃದಂಗದಲ್ಲಿ ರಾಕೇಶ್ ಹೊಸಬೆಟ್ಟು ಸಹಕರಿಸಿದರು. ವಿದುಷಿ ಶ್ರೀಲತಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಅಂಕಿತಾ ಅವರನ್ನು ಕ್ಷೇತ್ರದ ಪರವಾಗಿ ಹಿರಿಯ ಯಕ್ಷಗಾನ ಕಲಾವಿದ ಮಾಧವ ನೆಟ್ಟಣಿಗೆ ಹಾಗೂ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಶಾಲು ಹೊದೆಸಿ ಹಣ್ಣು ಹಂಪಲುಗಳನ್ನಿತ್ತು ಗೌರವಿಸಿದರು. ಶಿವನ್ಯ ಬದಿಯಡ್ಕ, ಉನ್ನತಿ ಪೈ ಬದಿಯಡ್ಕ, ತನ್ವಿತ ಬದಿಯಡ್ಕ, ಲಕ್ಷ್ಮಿ ಪೈ ಬದಿಯಡ್ಕ ಮುಂತಾದವರು ನೃತ್ಯದಲ್ಲಿ ಸಹಕರಿಸಿದರು.