ಹೈದರಾಬಾದ್: ಆಂಧ್ರಪ್ರದೇಶದಲ್ಲಿ 10 ವರ್ಷದ ಬಾಲಕನೊಬ್ಬ 'ಗಿಲಾನ್ ಬರೈ ಸಿಂಡ್ರೋಮ್' (ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲಿನ ದಾಳಿ-ಜಿಬಿಸಿ) ಕಾಯಿಲೆಯಿಂದ ಮೃತಪಟ್ಟಿದ್ದು, ಇದು ಜಿಬಿಸಿ ಕಾಯಿಲೆಯಿಂದ ಸಾವಿಗೀಡಾದ ರಾಜ್ಯದ ಮೊದಲ ಪ್ರಕರಣವಾಗಿದೆ.
ಶ್ರೀಕಾಕುಳಂ ಜಿಲ್ಲೆಯ ಸಂತಬೊಮ್ಮಾಳಿ ಗ್ರಾಮಕ್ಕೆ ಸೇರಿದ 10 ವರ್ಷದ ಬಾಲಕ ಜಿಬಿಸಿ ರೋಗಲಕ್ಷಣದಿಂದ ಜ.31ರಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಕಾಕುಳಂ ಮತ್ತು ವಿಶಾಖಪಟ್ಟಣದ ಸರ್ಕಾರಿ ಆಸ್ಪತ್ರೆ ಸ್ಥಳಾಂತರಿಸಲಾಯಿತು.
ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಅವನು ಮೃತಪಟ್ಟಿದ್ದಾನೆ.
'ರಾಜ್ಯದಲ್ಲಿ ಪ್ರಸ್ತುತ 17 ಜನರಲ್ಲಿ ಜಿಬಿಸಿ ಕಾಯಿಲೆ ಪತ್ತೆಯಾಗಿದ್ದು, ಎಲ್ಲರಿಗೂ ವಿಶಾಖಪಟ್ಟಣ, ಕಾಕಿನಾಡ, ಗುಂಟೂರು ಮತ್ತು ಕರ್ನೂಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಆಂಧ್ರ ಸರ್ಕಾರ ತಿಳಿಸಿದೆ.