ತಿರುವನಂತಪುರಂ: ಬಾಕಿ ಮೊತ್ತವನ್ನು ಪಾವತಿಸದೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳನ್ನು ಪೂರೈಸುವುದಿಲ್ಲ ಎಂದು ಕಂಪನಿಗಳು ಹೇಳಿದ ನಂತರ, ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ ಸಾಲ ಪಡೆದುಕೊಂಡು ಸಮಸ್ಯೆ ತೀರಿಸಿದೆ.
ಕೇರಳ ಹಣಕಾಸು ನಿಗಮದಿಂದ ಶೇ. 10 ಬಡ್ಡಿದರದಲ್ಲಿ 400 ಕೋಟಿ ಸಾಲ ಪಡೆಯುತ್ತಿದೆ. ಇದರಲ್ಲಿ ಮೊದಲ ಹಂತದಲ್ಲಿ ಪಡೆದ 180 ಕೋಟಿ ರೂ.ಗಳನ್ನು ಶೀಘ್ರದಲ್ಲೇ ಔಷಧ ಕಂಪನಿಗಳಿಗೆ ವರ್ಗಾಯಿಸಲಾಗುವುದು. ಔಷಧ ಕಂಪನಿಗಳಿಗೆ ಬಾಕಿ ಇರುವ ಮೊತ್ತ 693 ಕೋಟಿ ರೂ. ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ನೀಡುವಂತೆ ಕೋರಿದ್ದರೂ, ಸದ್ಯಕ್ಕೆ ಅದನ್ನು ಪೂರೈಸಲು ಸಾಧ್ಯವಿಲ್ಲ ಎಂದು ಸರ್ಕಾರ ಕೇರಳ ವೈದ್ಯಕೀಯ ಸೇವೆಗಳ ನಿಗಮಕ್ಕೆ ತಿಳಿಸಿದೆ. ಸಾಲ ಪಡೆದ ತಕ್ಷಣ ಬಾಕಿ ಹಣವನ್ನು ಪಾವತಿಸಲಾಗುವುದು. ಸರ್ಕಾರ ಇತ್ತೀಚೆಗೆ 200 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.