ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಐದು ವರ್ಷಗಳಿಗೊಮ್ಮೆ ನಡೆದುಕೊಂಡು ಬರುತ್ತಿರುವ ನಡಾವಳಿ ಮಹೋತ್ಸವವು ಫೆಬ್ರವರಿ 27ರಿಂದ ಮಾ.2ರ ತನಕ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದ ಹಾಗೂ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದಾಗಿ ಉತ್ಸವ ಸಮಿತಿ ಪದಾಧಿಕಾರಿ ದೇವದಾಸ್ ಕುಂಟಂಗೇರಡ್ಕ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಫೆ.27ರಂದು ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯರಿಗೆ ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಉಗ್ರಾಣ ತುಂಬಿಸುವುದು, ಭಜನೆ, ಮಧ್ಯಾಹ್ನ ಹರಿಕಥಾ ಸತ್ಸಂಗ ನಡೆಯಲಿದೆ. ಸಂಜೆ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಯಾತ್ರೆ ಕ್ಷೆತ್ರಕೆಕ ತಲುಪಲಿದೆ. ರಾತ್ರಿ ತುಳುವೆರೆ ಉಡಲ್ ಜೋಡುಕಲ್ಲು ವತಿಯಿಂದ 'ತನಿಯಜ್ಜೆ'ತುಳು ನಾಟಕ ಪ್ರದರ್ಶನಗೊಳ್ಳುವುದು.
ಫೆ.28ರಂದು ಬೆಳಗ್ಗೆ ಮಹಾ ಚಂಡಿಕಾ ಹೋಮ, ಅಪರಾಹ್ನ ಭಜನೆ, ಸಂಜೆ ಮೆಗಾ ತಿರುವಾದಿರ ನೃತ್ಯ ಪ್ರದರ್ಶನ, ಲಲಿತಾ ಸಹಸ್ರ ನಾಮಾರ್ಚನೆ, ಸಂಜೆ 7ಕ್ಕೆ ಮಂಗಳೂರು ಲಕುಮಿ ತಂಡದ ಕುಸಾಲ್ದ ಕಲಾವಿದರಿಂದ, ಅರವಿಂದ ಬೋಳಾರ್ ವಿಭಿನ್ನ ಅಭಿನಯದ 'ಒರಿಯಾಂಡಲಾ ಸರಿಬೋಡು'ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.1ರಂದು ಬೆಳಗ್ಗೆ ಭಜನೆ, ಅಪರಾಹ್ನ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಾಯಿಪ್ಪಾಡಿ ಅಮರನೆಯ ಶ್ರೀ ದಾನಮಾತಾರ್ಂಡವರ್ಮ ರಾಜ 13 ಯಾನೆ ರಾಮಂತರಸುಗಳಿಗೆ ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭೆ, ರಾತ್ರಿ ಕೋಲ್‍ಕಳಿ ನೃತ್ಯ ಪ್ರದರ್ಶನ ನಡೆಯುವುದು. ನಂತರ ನಡಾವಳಿ ಉತ್ಸವ ಆರಂಭ, ಭಂಡಾರ ಮೆರವಣಿಗೆ, ಶ್ರೀ ದೇವಿಯ ನೃತ್ಯೋತ್ಸವ, ರಾತ್ರಿ ಕ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ ಬೆಂಗಳೂರು ಮತ್ತು ಬಳಗದವರಿಂದ 'ರಾಗತರಂಗಿಣಿ' ಸಂಗೀತ ರಜಮಂಜರಿ, ರಾತ್ರಿ ಶ್ರೀ ವಿಷ್ಣುಮೂರ್ತಿ ತೊಡಂಲ್ ನಡೆಯಲಿದೆ.
ಮಾ.2ರಂದು ಬೆಳಗ್ಗೆ 2.30ಕ್ಕೆ ಬಲಿಪೂಜೆ ಮತ್ತು ದೇವರ ನೃತ್ಯೋತ್ಸವ, 5.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಲಿದೆ. 9ಕ್ಕೆ ಚಪ್ಪರ ಮದುವೆ ಮತ್ತು ಎಡಙಚಾರ, ಶ್ರೀ ದೇವರ ನೃತ್ಯೋತ್ಸವ, ತುಲಾಭಾರ ಸೇವೆ, ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಅಪರಾಹ್ನ ಶ್ರೀ ಪಿಲಿಚಾಮುಂಡಿ ದೈವದ ಕೋಲ, ಬಬ್ಬರ್ಯನ ಕೋಲ, ಮೆಗಾ ಕೈಕೊಟ್ಟ್ ನೃತ್ಯ ಪ್ರದರ್ಶನ, ಗುಳಿಗನ ಕೋಲ, ವಿವಿಧ ಮನರಂಜನಾ ಕಾರ್ಯಕ್ರಮ, ರಾತ್ರಿ ಭಂಡಾರ ನಿರ್ಗಮನದೊದಿಗೆ ನಡವಳಿ ಸಮಾಪ್ತಿಗೊಳ್ಳುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎಳೆಯ ಚೆಟ್ಟಿಯರ್ ಚಂದ್ರಶ್ರೇಖರ ಕುಂಟಂಗೇರಡ್ಕ, ಎಂ.ಪ್ರಭಾಕರ ಕೂಡ್ಲು, ಬಿ.ಎನ್. ನರೇಂದ್ರ, ರವಿ ನಾಯ್ಕಾಪು, ಎಂ. ನಾರಾಯಣ, ದಯಾನಂದ ನಾಯ್ಕಾಪು, ಚಂದ್ರಶೇಖರ ಕುಂಟಂಗೇರಡ್ಕ ಉಪಸ್ಥಿತರಿದ್ದರು.