ಕೈರೊ: ಕದನ ವಿರಾಮ ಒಪ್ಪಂದದಂತೆ, ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಗುರುವಾರ ತಿಳಿಸಿದೆ. ಇದರಿಂದ, ಗಾಜಾಪಟ್ಟಿಗೆ ಸಂಬಂಧಿಸಿ ಏರ್ಪಟ್ಟಿರುವ ಕದನ ವಿರಾಮ ಕುರಿತು ಎದ್ದಿದ್ದ ವಿವಾದವೊಂದು ನಿವಾರಣೆಯಾದಂತಾಗಿದೆ.
'ಕದನ ವಿರಾಮ ಒಪ್ಪಂದ ಜಾರಿಗೆ ಎದುರಾಗುವ ಎಲ್ಲ ಅಡ್ಡಿಗಳನ್ನು ನಿವಾರಣೆ ಮಾಡುವುದಾಗಿ ಈ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ಮತ್ತು ಕತಾರ್ ನಾಯಕರು ಖಚಿತ ಪಡಿಸಿದ್ದಾರೆ' ಎಂದು ಹಮಾಸ್ ಹೇಳಿದೆ.
ಇಸ್ರೇಲ್‌ನ ಮತ್ತಷ್ಟು ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಹಮಾಸ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ, ಹಮಾಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.