ಮಂಜೇಶ್ವರ: ಮೀಯಪದವು ಸಮೀಪದ ಅಮ್ಮೆನಡ್ಕದ ಕೃಷಿಕ ನಾರಾಯಣ ಭಟ್ ಹಾಗೂ ವನಿತಾ ದಂಪತಿಗಳ ಪುತ್ರಿ ಭಾಗ್ಯಶ್ರೀ ಅವರು ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾನಿಲಯ (ಪರಿಗಣಿತ) ಇದರ 2024 ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಕಂಪ್ಯೂಟರ್ ಅಪ್ಲಿಕೇಶನ್ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ (ಎಂ.ಸಿ.ಎ )ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ. ಇವರು ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ವಿದ್ಯಾವರ್ಧಕ ಪ್ರೌಢಶಾಲೆ ಮೀಯಪದವು ಇಲ್ಲಿನ ಪೂರ್ವ ವಿದ್ಯಾರ್ಥಿನಿ. ಈ ಹಿಂದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಪದವಿಯಲ್ಲೂ ಇವರು ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರು.