ಮಂಜೇಶ್ವರ: ಕೀರ್ತೆಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಸದಾಶಿವ ದೇವರ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಗುರುವಾರ ನೆರವೇರಿತು. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮ ಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳವರ ನೇತೃತ್ವ ಹಾಗೂ ಅರ್ಚಕ ವೃಂದದ ಸಹಭಾಗಿತ್ವದಲ್ಲಿ ವೈದಿಕ ವಿಧಿ ವಿಧಾನಗಳು ನಡೆಯಿತು.
ಕಾರ್ಯಕ್ರಮದಂಗವಾಗಿ ವಾಸ್ತು ರಕ್ಷೆ, ನವಕ, ತತ್ವಹೋಮ ನಡೆಯಿತು. ದೇವಸ್ಥಾನದ ಮೊಕ್ತೇಸರರು, ಆಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಪಾಲ್ಗೊಂಡಿದ್ದರು. ಕ್ಷೇತ್ರದಲ್ಲಿ ಮಾರ್ಚ್ 01 ರಿಂದ 8 ರ ವರೆಗೆ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಬ್ರಹ್ಮಕಲಶೋತ್ಸವದ ನವೀಕರನ ಕಾರ್ಯಗಳ ಹಿನ್ನೆಲೆಯಲ್ಲಿ ಮಾರ್ಚ್ 03ರ ವರೆಗೆ ದೇವಸ್ಥಾನದ ಪೂಜಾ ಸಮಯದಲ್ಲಿ ಬದಲಾವಣೆ ತರಲಾಗಿದೆ. ಬೆಳಗ್ಗಿನ ಪೂಜೆ ಹಾಗೂ ಮಧ್ಯಾಹ್ನದ ಪೂಜೆ ಬೆಳಗ್ಗೆ 8ಕ್ಕೆ ಏಕ ಕಾಲದಲ್ಲಿ ಹಾಗೂ ರಾತ್ರಿಯ ಪೂಜೆಯು ಸಂಜೆ 7 ಗಂಟೆಗೆ ನಡೆಯಲಿದೆ. ಸೋಮವಾರದ ಮಧ್ಯಾಹ್ನ ಬಲಿವಾಡು ಸೇವೆಯನ್ನೂ ಕೈಬಿಡಲಾಗಿದೆ. ಪೂಜೆಯ ವೇಳೆ ಇತರ ಸೇವೆಗಳು ಎಂದಿನಂತೆ ಇರಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.