ಪೆರ್ಲ: ಮಹಾಶಿವರಾತ್ರಿ ಅಂಗವಾಗಿ ಶತರುದ್ರಾಭಿಷೇಕ ಕಾರ್ಯಕ್ರಮ ಫೆ. 26ರಂದು ಪೆರ್ಲ ಸನಿಹದ ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಜರುಗಲಿದೆ. ಅಂದು ಬೆಳಗ್ಗೆ 6ಕ್ಕೆ ನಡೆ ತೆರೆಯುವುದು, 5.30ಕ್ಕೆ ಶತರುದ್ರಾಭಿಷೇಕ ಆರಂಭಗೊಳ್ಳುವುದು. ರಾತ್ರಿ 9.30ಕ್ಕೆ ಮಹಾಪೂಜೆಯೊಂದಿಗೆ ಪ್ರಸಾದವಿತರಣೆ ನಡೆಯುವುದಾಗಿ ಪ್ರಕಟಣೆ ತಿಳಿಸಿದೆ.