ಮಂಜೇಶ್ವರ: ವಿಶ್ವ ಉರ್ದು ದಿನದ ಅಂಗವಾಗಿ ರಾಜ್ಯ ಮಟ್ಟದಲ್ಲಿ ಆಯೋಜಿಸಿದ್ದ ಅಲ್ಲಾಮ ಇಕ್ಬಾಲ್ ಟ್ಯಾಲೆಂಟ್ ಮೀಟ್ ನಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಉದ್ಘಾಟನೆ ಮುಳಿಂಜ ಜಿ.ಎಲ್.ಪಿ. ಶಾಲೆಯಲ್ಲಿ ಗುರುವಾರ ಜರಗಿತು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ದಿನಾಚರಣೆ ಉದ್ಘಾಟಿಸಿರು.
ಕಾರ್ಯಕ್ರಮದಲ್ಲಿ ಉಪಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತರ್ ಬಾಕ್ರಬೈಲ್ ಅಧ್ಯಕ್ಷತೆ ವಹಿಸಿದ್ದರು. ಸಿತಾರಾ ಟೀಚರ್ ಶುಭಾಶಂಸನೆಗೈದರು. ಉಪಜಿಲ್ಲಾ ಅಕಾಡೆಮಿಕ್ ಸಂಯೋಜಕಿ ಸುಲೈಖಾ ಟೀಚರ್ ಸ್ವಾಗತಿಸಿ, ಉಪಜಿಲ್ಲಾ ಅಧ್ಯಕ್ಷೆ ಸುಜಾತಾ ಟೀಚರ್ ವಂದಿಸಿದರು.