ಕಾಸರಗೋಡು: ಹಿಂದೂ ಆರಾದನಾಲಯಗಳು ನಮ್ಮ ಸಂಸ್ಕ್ರತಿ, ಸಂಸ್ಕಾರಗಳ ಅರಿವು ಮುಡಿಸುವ ಕೇಂದ್ರಗಳಾಗಿ ಬೆಳೆಯಬೇಕು ಎಂಬುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಕಾಸರಗೋಡು ಮನ್ನಿಪ್ಪಾಡಿ ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನದ ಪುನ:ಪ್ರತಿಷ್ಠಾ ಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶಿಥಿಲಗೊಂಡಿರುವ ದೈವ, ದೇವಸ್ಥಾನಗಳ ಪುನ:ನವೀಕರಣ ಕಾರ್ಯಗಳಲ್ಲಿ ಕೈಜೋಡಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಬೇಕು. ಜತೆಗೆ ನಮ್ಮ ಧರ್ಮದ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನೂ ನಡೆಸಬೇಕಾಗಿದೆ ಎಂದು ತಿಳಿಸಿದರು. ಕುಮಾರಿ ಹಾರಿಕಾ ಮಂಜುನಾಥ್ ಅವರು 'ಧರ್ಮ ಮತ್ತು ಸಂಸ್ಕøತಿ ಎಂಬ ವಿಷಯದ ಬಗ್ಗೆ ಧಾರ್ಮಿಕ ಭಾಷಣ ಮಾಡಿದರು.
ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನದ ತಂತ್ರಿ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಉದಯ ಕುಮಾರ್ ಮನ್ನಿಪ್ಪಾಡಿ ಅದ್ಯಕ್ಷತೆ ವಹಿಸಿದ್ದರು. ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ, ವಕೀಲ ಪಿ. ಮುರಳೀಧರನ್, ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಟ್ರಸ್ಟಿ ಜಯನ್, ಕೆ.ಜಿ ಶ್ಯಾನುಭಾಗ್, ವೈ.ವಿ ರವಿರಾಜ್, ಉಮೇಶ್ ಗಟ್ಟಿ, ಕುಞÂರಾಮ ಮಣಿಯಾಣಿ, ಲತಾನಂದನ್, ಓಮನರವಿ. ಅಜಯ್‍ಕುಮಾರ್, ನವೀನ್‍ಕುಮಾರ್, ವೇಣುಗೋಪಾಲ್, ನವೀನ್‍ಕುಮಾರ್, ಪವನ್ ಕುಮಾರ್, ಅಚ್ಯುತ ಕಾಳ್ಯಂಗಾಡು, ಅಜಿತ್ ಕಾಂತಿಕೆರೆ ಉಪಸ್ಥಿತರಿದ್ದರು.
ಲೀಲಾರದಕೃಷ್ಣ ಮನ್ನಿಪ್ಪಾಡಿ ಸ್ವಾಗತಿಸಿದರು. ಅಶ್ವಿನಿಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಶಾರದಾನಾರಾಯಣ ಮನ್ನಿಪ್ಪಾಡಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಫ್ಯೂಶನ್ ಡ್ಯಾನ್ಸ್, ತಿರುವಾದಿರ ನೃತ್ಯ ಸಂಗಮ ನಡೆಯಿತು.