ಪೆರ್ಲ: ಸ್ವರ್ಗ ವಾರ್ಡು ಮಟ್ಟದ ಪ್ರಾದೇಶಿಕ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕುಟುಂಬಶ್ರೀ ಘಟಕಗಳ ವಾರ್ಷಿಕೋತ್ಸವ ಸ್ವರ್ಗ ಶಾಲೆಯಲ್ಲಿ ಬುಧವಾರ ನಡೆಯಿತು.ವಾರ್ಷಿಕೋತ್ಸವವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ ಎಸ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಸದಸ್ಯ ರಾಮಚಂದ್ರ ಎಂ.ವಹಿಸಿದ್ದರು. ಸಭೆಯಲ್ಲಿ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ, ಕಾಟುಕುಕ್ಕೆ ಹೈಯರ್ ಶಾಲಾ ಶಿಕ್ಷಕಿ ವಾಣಿ ಜೆ ಶೆಟ್ಟಿ, ಸ್ವರ್ಗ ಶಾಲಾ ಶಿಕ್ಷಕಿ ಗೀತಾಂಜಲಿ,ಲೇಖಕಿ ದಿವ್ಯಾ ಶಿರಂತ್ತಡ್ಕ ಉಪಸ್ಥಿತರಿದ್ದರು.
ಕುಟುಂಬಶ್ರೀ ಸದಸ್ಯೆ ಹಾಗೂ ಸುಧೀರ್ಘ ಕಾಲ ಸ್ವರ್ಗ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರತ್ನ ಬೈರಡ್ಕ ಇವರನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ ಎಸ್ ಸನ್ಮಾನಿಸಿದರು. ಚಂದ್ರಾವತಿ ಎ.ಟಿ , ಶಾಂಭವಿ ಪಿ.ಎಸ್ ಕಟ್ಟೆ ಹಾಗೂ ವಿನುತಾ ಪಿ.ಎಸ್ ಕಟ್ಟೆ ಪ್ರಾರ್ಥನೆ ಹಾಡಿದರು. ಎ.ಡಿ.ಎಸ್ ಕಾರ್ಯದರ್ಶಿ ಶಶಿಕಲಾ ಕೆ ಸ್ವಾಗತಿಸಿ, ಎ.ಡಿ.ಎಸ್ ಉಪಾಧ್ಯಕ್ಷೆ ಅನಿತಾ ಕೆ ವಂದಿಸಿದರು.ಚಂದ್ರಾವತಿ ಎಂ ಕಾರ್ಯಕ್ರಮ ನಿರೂಪಿಸಿದರು.