HEALTH TIPS

ಗುವಾಹಟಿ ಐಐಟಿ ಸಂಶೋಧಕರಿಂದ ಮೈ ಬೆಚ್ಚಗಿಡುವ ಜವಳಿ ಅನ್ವೇಷಣೆ

ನವದೆಹಲಿ: ಸ್ವಯಂ ಶುದ್ಧೀಕರಣ, ಬಾಹ್ಯದ ಶೀತ ವಾತಾವರಣ ಆಧರಿಸಿ ಬೆಚ್ಚನೆ ಅನುಭವ ನೀಡುವ ಜವಳಿಯನ್ನು ಗುವಾಹಟಿ ಐಐಟಿಯ ಸಂಶೋಧಕರು ತಯಾರಿಸಿದ್ದಾರೆ. 

ಶೀತದ ವಾತಾವರಣದಲ್ಲಿ ಅನಾರೋಗ್ಯಕ್ಕೆ ಈಡಾಗುವವರಿಗೆ ಇದು ಅನುಕೂಲಕರವಾಗಿದೆ. 'ನ್ಯಾನೊ ಮೈಕ್ರೊ ಸ್ಮಾಲ್' ನಿಯತಕಾಲಿಕದಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.

ಐಐಟಿ ಗುವಾಹಟಿ ಸಂಶೋಧಕರ ತಂಡವು, ನವೀನ ರೀತಿಯ ಜವಳಿ ಅಭಿವೃದ್ಧಿ ಪಡಿಸಿದೆ. ಇದು ತೆಳುವಾಗಿದೆ. ಹತ್ತಿಯ ಜೊತೆಗೆ ಅತಿ ತೆಳುವಾದ ಬೆಳ್ಳಿಯ ಎಳೆಗಳನ್ನು ಬಳಸಲಾಗಿದೆ. ಹೀಗಾಗಿ ಈ ಜವಳಿಯು ವಾತಾವರಣಕ್ಕೆ ಅನುಗುಣವಾಗಿ ಬೆಚ್ಚನೆಯ ಅನುಭವವನ್ನು ನೀಡಲಿದೆ' ಎಂದು ಹೇಳಿದ್ದಾರೆ.

'ಈ ಉಡುಪಿಗೆ ಬಳಸಿರುವ ಎಳೆಗಳು ಮನುಷ್ಯನ ಕೂದಲಿಗಿಂತಲೂ ಲಕ್ಷ ಪಟ್ಟು ಹೆಚ್ಚು ತೆಳ್ಳಗಿರಲಿವೆ. ಸೋಲಾರ್‌ ಶಕ್ತಿ ಆಧರಿಸಿ ಜವಳಿಯು ಬೆಚ್ಚಗಿನ ಅನುಭವ ನೀಡಲಿದೆ' ಎಂದಿದ್ದಾರೆ.

ಹೊಸದಾಗಿ ತಯಾರಿಸಿರುವ ಈ ಜವಳಿಗಾಗಿ ಹಕ್ಕುಸ್ವಾಮ್ಯ ಪಡೆಯಲು ಸಂಶೋಧಕರ ತಂಡವು ಅರ್ಜಿ ಸಲ್ಲಿಸಿದ್ದು, ಆ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries