ಜೆರುಸಲೇಂ: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಸೋಮವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ ಬಂಡುಕೋರ ಸಂಘಟನೆಯ ಲೆಬನಾನ್ ಘಟಕದ ಮುಖ್ಯಸ್ಥ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಕದನ ವಿರಾಮ ಒಪ್ಪಂದದ ಅಡಿಯಲ್ಲಿ ದಕ್ಷಿಣ ಲೆಬನಾನ್‌ನಿಂದ ಸೇನೆ ಹಿಂಪಡೆಯಲು ಇಸ್ರೇಲ್‌ಗೆ ನೀಡಿರುವ ಗಡುವು ಮುಗಿಯುವ ಒಂದು ದಿನ ಮೊದಲು ಈ ದಾಳಿ ನಡೆದಿದೆ.
'ಲೆಬನಾನ್‌ನ ಹಮಾಸ್ ಸಂಘಟನೆಯ ಮುಖ್ಯಸ್ಥ ಮಹಮ್ಮದ್ ಶಹೀನ್ ಮೃತಪಟ್ಟಿದ್ದಾನೆ. ಈತ ಇತ್ತೀಚೆಗೆ ಇರಾನ್ ನಿರ್ದೇಶಿತ ಭಯೋತ್ಪಾದಕ ದಾಳಿಗಳ ಬಗ್ಗೆ ಯೋಜನೆ ರೂಪಿಸಿದ್ದ' ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಮಹಮ್ಮದ್ ಸಾವನ್ನು ಹಮಾಸ್ ಸಂಘಟನೆಯು ಖಚಿತಪಡಿಸಿದೆ. ಆದರೆ ಆತನನ್ನು 'ಮಿಲಿಟರಿ ಕಮಾಂಡರ್' ಎಂದು ಕರೆದಿದೆ.