ಉಪ್ಪಳ: ವೇತನ ಮಂಜೂರಾತಿ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ, ದ್ವೇಷ ಮತ್ತು ಅಧಕ್ಷತೆಯ ನೇಮಕಾತಿ ನಿರಾಕರಿಸಲ್ಪಟ್ಟ ಶಿಕ್ಷಕಿ ಅಲೀನಾ ಅವರ ಸಾವಿಗೆ ಸರ್ಕಾರವೇ ಹೊಣೆ ಎಂದು ಕೆ.ಪಿ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲಾ ಸಮಿತಿ ಆರೋಪಿಸಿದೆ.
ಕೆಪಿಎಸ್ಟಿಎ ಮಂಜೇಶ್ವರ ಉಪಜಿಲ್ಲಾ ಸಂಗಮವನ್ನು ಉಪಜಿಲ್ಲಾ ಎಇಒ ಕಚೇರಿ ಮುಂದೆ ಉದ್ಘಾಟಿಸಿದ ವೇಳೆ ಸಂಘಟನೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಕಾಸರಗೋಡು ಕಂದಾಯ ಜಿಲ್ಲಾ ಉಪಾಧ್ಯಕ್ಷ ಜನಾರ್ಧನನ್ ಕೆ.ವಿ. ಪ್ರತಿಭಟನಾ ಸಂಗಮವನ್ನು ಉದ್ಘಾಟಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಮತ್ತು ಮಂಜೂರಾತಿ ವಿಳಂಬವನ್ನು ನಿವಾರಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಹೇಳಿದರು.
ಕೆ.ಪಿ.ಎಸ್.ಟಿ.ಎ ಕಂದಾಯ ಜಿಲ್ಲಾ ಜೊತೆ ಕಾರ್ಯದರ್ಶಿ ವಿಮಲ್ ಅಡಿಯೋಡಿ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರಹಮಾನ್, ಶ್ರೀನಿವಾಸ ಕೆ. ಹೆಚ್, ಮುಖ್ಯ ಶಿಕ್ಷಕರಾದ ಸುಕೇಶ .ಎ. ಕೃಷ್ಣರಾಜ್ ಕೋಳ್ಯೂರು, ಕೃಷ್ಣಮೋಹನ ಮಾತನಾಡಿದರು. ಉಪಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆಯಲ್ಲಿ ನಡೆದ ಧರಣಿಯಲ್ಲಿ ಓ.ಎಂ. ರಶೀದ್ ಸ್ವಾಗತಿಸಿ, ಪ್ರಸೀತಾ ಕುಮಾರಿ ವಂದಿಸಿಸದರು.