ಪೆರ್ಲ: ಅಸೌಖ್ಯ ಬಾಧಿತರ ಹಾಗೂ ವಯೋವೃದ್ಧರ ಆರೋಗ್ಯ ಕ್ಷೇಮಕ್ಕಾಗಿ ಕಾರ್ಯಚರಿಸುವ ಪಾಲಿಟೀವ್ ಕೇರ್ ನ ಫಲಾನುಭವಿಗಳ ಸ್ನೇಹ ಸಂಗಮ ಕಾರ್ಯಕ್ರಮ ಪೆರ್ಲದ ಭಾರತಿ ಸದನದಲ್ಲಿ ಶನಿವಾರ ಜರಗಿತು. ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಾಲಿಟೀವ್ ಕೇರ್ ಫಲಾನುಭವಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಉಪಾಧ್ಯಕ್ಷೆ ರಮ್ಲ, ಬ್ಲಾಕ್ ಪಂ. ಸದಸ್ಯ ಕೆ.ಪಿ.ಅನಿಲ್ ಕುಮಾರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಸಿ ಡಿ ಎಸ್ ಅಧ್ಯಕ್ಷೆ ಜಲಜಾಕ್ಷಿ,ಪಂ.ಸದಸ್ಯರಾದ ರಾಮಚಂದ್ರ ಎಂ.ನರಸಿಂಹ ಪೂಜಾರಿ,ಉಷಾ ಕುಮಾರಿ, ಇಂದಿರಾ, ಆಶಾಲತ, ಕುಸುಮಾವತಿ, ಆಯುರ್ವೇದ ವೈದ್ಯಾಧಿಕಾರಿ ಡಾ.ಜಯಶ್ರೀ ಕೆ, ಹೋಮಿಯೋಪತಿ ವೈದ್ಯಾಧಿಕಾರಿ ಡಾ.ಶೀತಲ್ ಸುಸಾನ್ ಫಿಲಿಪ್ ಮುಂತಾದವರು ಉಪಸ್ಥಿತರಿದ್ದರು. ಪಾಲಿಟೀವ್ ನರ್ಸ್ ಜೋಸ್ಮಿ ಜೋರ್ಜ್ ವರದಿ ಮಂಡಿಸಿದರು. ಡಾ.ಗ್ರೀಷ್ಮ ಪಿ.ಆರ್ ಸ್ವಾಗತಿಸಿ ಹೆಲ್ತ್ ಇನ್ಸ್ ಪೆಕ್ಟರ್ ವಸಂತ ಕುಮಾರ್ ವಂದಿಸಿದರು. ಬಳಿಕ ವಿವಿಧ ಮನೋರಂಜನೆಯ ಕಾರ್ಯಕ್ರಮಗಳು ಜರಗಿದವು.