ಮುಳ್ಳೇರಿಯ: ಕೋರಿಕಂಡ ಅಂಗನವಾಡಿಯಲ್ಲಿ ಕನ್ನಡ ಬಲ್ಲ ಶಿಕ್ಷಕಿಯನ್ನು ನೇಮಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ.
ಇಲ್ಲಿ ಕನ್ನಡ ತಿಳಿಯದ ಶಿಕ್ಷಕಿಯನ್ನು ಗ್ರಾ.ಪಂ.ಅಧಿಕೃತರು ಐಸಿಡಿಎಸ್ ಅಥವಾ ಇತರ ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ನೇಮಿಸಿತ್ತು. ಇದರ ವಿರುದ್ಧ ಹೋರಾಟ ಸಮಿತಿ ಹೈಕೋರ್ಟ್ ಮೆಟ್ಟಲೇರಿತ್ತು. ಈ ತೀರ್ಪು ಹೋರಾಟಕ್ಕೆ ಸಿಕ್ಕ ಜಯವೆಂಬುದಾಗಿ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.