ಬದಿಯಡ್ಕ: ಅಹಂಕಾರವೆಂಬ ಪರ್ವತದ ತುತ್ತತುದಿಯನ್ನೇರಿದ ಪ್ರತಿಯೊಬ್ಬನೂ ಒಂದಲ್ಲ ಒಂದು ದಾರಿಯಲ್ಲಿ ಕೆಳಗೆ ಬೀಳುವುದಂತೂ ನಿಶ್ಚಿತ. ವಿದ್ಯಾರ್ಥಿಗಳು ಯಾವತ್ತೂ ಜೀವನದಲ್ಲಿ ವಿನಮ್ರತೆಯನ್ನು ಅಳವಡಿಸಿಕೊಳ್ಳಬೇಕು. ಅಹಂಕಾರ ತೊರೆದಾಗ ಮಾನವ ಉತ್ತಮ ವ್ಯಕ್ತಿಯಾಗುತ್ತಾನೆ ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಜೇಂದ್ರ ಬಜಕೂಡ್ಲು ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಂಗಳವಾರ ಜರಗಿದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಜ್ಞಾನದ ಪ್ರತೀಕವಾಗಿ ಪ್ರಜ್ವಲಿಸುತ್ತಿರುವ ದೀಪವನ್ನು ನೀಡಿ ಹರಸಿ ಉತ್ತನ ಶಿಕ್ಷಣಕ್ಕೆ ಕಳುಹಿಸಿಕೊಡುವ ಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಿವೃತ್ತ ಕಲಾ ಶಿಕ್ಷಕರಾದ ಪರಮೇಶ್ವರ ಹೆಬ್ಬಾರ್ ಇವರು ವಿದ್ಯಾರ್ಥಿಗಳ ಸಾ`Àನೆಗಳನ್ನು ಶ್ಲಾಘಿಸಿ ಮುಂಬರುವ ಪರೀಕ್ಷೆಗಳಲ್ಲಿ ಅಕ ಅಂಕ ಗಳಿಸುವಲ್ಲಿ ಸಫಲರಾಗಿರಿ ಎಂದು ಆಶೀರ್ವದಿಸಿದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಾಲೆಗೆ ಗುರು ಕಾಣಿಕೆಯನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಸ್ಪಂದನ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳ ಧನಾತ್ಮಕ ಬೆಳವಣಿಗೆಗಳನ್ನು ಉಲ್ಲೇಖಿಸುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಖಜಾಂಚಿ ರಾಜಗೋಪಾಲ ಚುಳ್ಳಿಕ್ಕಾನ ಶುಭಹಾರೈಸಿದರು. ಹತ್ತನೆಯ ತರಗತಿಯ ವಿದ್ಯಾರ್ಥಿಗಳೆಲ್ಲರೂ ತಮ್ಮ ಶೈಕ್ಷಣಿಕ ಬೆಳವಣಿಗೆಗಳನ್ನು, ಅನಿಸಿಕೆಗಳನ್ನು ಹಂಚಿಕೊಂಡರು. ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಪಾಲಕರೂ ಭಾಗವಹಿಸಿದ್ದು ಕೃಷ್ಣ ಪ್ರಕಾಶ್ ಬಳ್ಳಂಬೆಟ್ಟು, ವೇಣುಗೋಪಾಲ್ ಪೆರ್ಲ, ತ್ರಿಪುರ ಸಂಯುಕ್ತಾ ಕುಂಜತ್ತೋಡಿ, ಶಾರದಾ ಮುಂಡೋಳುಮೂಲೆ, ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಅಧ್ಯಾಪಕ ವೃಂದದ ಪರವಾಗಿ ರಶ್ಮೀ ಪೆರ್ಮುಖ, ಸರೋಜಾ ಕಾನತ್ತಿಲ, ಶಾಂತಿ ವಿ ಆಚಾರ್ಯ ಹಿತವಚನ ನುಡಿದು ಆಶೀರ್ವದಿಸಿದರು. ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದರು. ವಿದ್ಯಾರ್ಥಿಗಳಾದ ಚಿನ್ಮಯ ರಾಮಣ್ಣ ರೈ ಸ್ವಾಗತಿಸಿ, ಖುಷಿ ರೈ ವಂದಿಸಿದರು. ಸಮನ್ವಿ ಮತ್ತು ಸಂಜನಾ ಕಾರ್ಯಕ್ರಮ ನಿರೂಪಿಸಿದರು.