ನ್ಯೂಯಾರ್ಕ್: 600 ಮಿಲಿಯನ್ ಭಾಷಿಕರನ್ನು ಹೊಂದಿರುವ ಹಿಂದಿ ಭಾಷೆಯು ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಬಹುಭಾಷೆ ಮತ್ತು ವಿದೇಶದಲ್ಲಿ ಹಿಂದಿ ಪ್ರಚಾರ' ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಸಂಸ್ಥೆ ಗ್ಲೋಬಲ್ ಕಮ್ಯುನಿಕೇಷನ್ಸ್‌ನ ಅಂಡರ್-ಸೆಕ್ರೆಟರಿ-ಜನರಲ್ ಮೆಲಿಸ್ಸಾ ಫ್ಲೆಮಿಂಗ್, 'ಹಿಂದಿ ಭಾಷಕರಿಗೆ ವಿಶ್ವಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ತಲುಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿ ಭಾಷೆಯನ್ನು ಪರಿಣಾಮಕಾರಿ ಬಳಕೆ ಮಾಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪಿ ಹರೀಶ್, ಹಿಂದಿ ಭಾಷೆಯ ಮಹತ್ವದ ಕುರಿತು ಒತ್ತಿ ಹೇಳಿದರು.
ಹಿಂದಿ ಭಾಷೆಯಲ್ಲಿ ವಿಶ್ವಸಂಸ್ಥೆಯ ವಾರ್ತೆಗಳನ್ನು ಪ್ರಚಾರ ಮಾಡಲು ಸುಮಾರು 7 ಮಿಲಿಯನ್ ಡಾಲರ್‌ಗಳನ್ನು ಭಾರತವು ನೀಡಿದೆ ಎಂದು ಉಲ್ಲೇಖಿಸಲಾಗಿದೆ.
ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, 'ಭಾರತವು ಬಹುಭಾಷಾ ಮತ್ತು ಬಹುಸಂಸ್ಕೃತಿಯನ್ನು ಹೊಂದಿದೆ' ಎಂದು ಹೇಳಿದರು.