ಢಾಕಾ: 'ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಕರೆತರಲು ಮಧ್ಯಂತರ ಸರ್ಕಾರ ಕ್ರಮಕೈಗೊಳ್ಳುತ್ತಿದೆ' ಎಂದು ಗೃಹ ಸಚಿವಾಲಯದ ಸಲಹೆಗಾರ ಲೆಫ್ಟಿನಂಟ್ ಜನರಲ್ (ನಿವೃತ್ತ) ಮೊಹಮ್ಮದ್ ಜಹಾಂಗೀರ್ ಅಲಂ ಚೌಧುರಿ ತಿಳಿಸಿದ್ದಾರೆ.
ಪದಚ್ಯುತಿ ಬಳಿಕ 77 ವರ್ಷದ ಶೇಖ್ ಹಸೀನಾ ಭಾರತದಲ್ಲಿ ನೆಲಸಿದ್ದಾರೆ.
ಶೇಖ್ ಹಸೀನಾ ಮತ್ತು ಅವರ ಸಂಪುಟದ ಇತರರ ವಿರುದ್ಧ ಈಗಾಗಲೇ ಬಾಂಗ್ಲಾದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಬಂಧನ ವಾರಂಟ್ ಜಾರಿಗೊಳಿಸಿದೆ.
ಬಂಧನ ವಾರಂಟ್ ಜಾರಿ ಆಗಿರುವ ಹಲವರನ್ನು ಕರೆತರಲು ಕಾನೂನುಕ್ರಮ ನಡೆಸಲಾಗಿದೆ. ಶೇಖ್ ಹಸೀನಾ ವಿರುದ್ದ ಈಗಾಗಲೇ ರೆಡ್ ನೋಟಿಸ್ ಜಾರಿ ಆಗಿದ್ದು, ಅವರಿಗೆ ಈಗ ಆಶ್ರಯ ನೀಡಿರುವ ರಾಷ್ಟ್ರವು ಅವರನ್ನು ಬಂಧಿಸಲೇ ಬೇಕಾಗುತ್ತದೆ ಎಂದು ತಿಳಿಸಿದರು.