ಅಡುಗೆ ಮನೆಗೆ ಕುಕ್ಕರ್ ಬಂದ ನಂತರ ಮಹಿಳೆಯರಿಗೆ ಅಡುಗೆ ತುಂಬಾ ಸುಲಭವಾಯಿತು. ಕುಕ್ಕರ್ನಲ್ಲಿ ಕೆಲವೇ ನಿಮಿಷಗಳಲ್ಲಿ ಅನ್ನ, ಬೇಳೆಕಾಳುಗಳು ಬೇಯುತ್ತದೆ. ಕುಕ್ಕರ್ ಎಲ್ಲರ ಅಡುಗೆ ಮನೆಯಲ್ಲಿ ಬಳಸುವ ಸಾಮಾನ್ಯ ವಸ್ತುಗಳಲ್ಲಿ ಒಂದಾಗಿದೆ. ಆದರೆ, ಕೆಲವೊಮ್ಮೆ ಈ ಕುಕ್ಕರ್‌ಗಳನ್ನು ಬಳಸುವಾಗ ಅದರ ಮೇಲಿನ ಮುಚ್ಚಳದಿಂದ ನೀರು ಸೋರುತ್ತಲೇ ಇರುತ್ತದೆ.
ಕುಕ್ಕರ್ಗೆ ಹೆಚ್ಚು ನೀರು ಹಾಕಿದರೂ ಕುಕ್ಕರ್ನಿಂದ ನೀರು ಸೋರುತ್ತಲೇ ಇರುತ್ತದೆ.
ಕುಕ್ಕರ್ ಗೆ ಬಳಸುವ ರಬ್ಬರ್ ಅಥವಾ ಗಾಸ್ಕೆಟ್ ಲೂಸ್ ಆದರೆ ಅದರಿಂದ ಎದುರಾಗುವ ಸಮಸ್ಯೆ ದೊಡ್ಡದು. ಕುಕ್ಕರ್ ನಲ್ಲಿ ಸರಿಯಾಗಿ ಪ್ರೆಶರ್ ನಿರ್ಮಾಣವಾಗದೆ ಕುಕ್ಕರ್ ಒಳಗಿನಿಂದ ನೀರೆಲ್ಲಾ ಹೊರಗೆ ಚೆಲ್ಲುತ್ತದೆ. ಆಗ ವಿಸಿಲ್ ಕೂಡಾ ಆಗುವುದಿಲ್ಲ. ಒಳಗಿನ ಆಹಾರ ಬೇಯುವುದೂ ಇಲ್ಲ.
ಆದರೆ ಲೂಸ್ ಆಗಿರುವ ಕುಕ್ಕರ್ ರಬ್ಬರ್ ಅನ್ನು ಎರಡೇ ನಿಮಿಷದಲ್ಲಿ ಮತ್ತೆ ಬಿಗಿಯಾಗಿಸಬಹುದು. ಇದಕ್ಕಾಗಿ ಈ ಸುಲಭ ಟ್ರಿಕ್ ಉಪಯೋಗಿಸಬೇಕು.
ಕುಕ್ಕರ್ ರಬ್ಬರ್ ಸಡಿಲವಾದರೆ ಹೀಗೆ ಮಾಡಿ:-
ಸಡಿಲವಾದ ಕುಕ್ಕರ್ ರಬ್ಬರ್ ಅನ್ನು 2 ರಿಂದ 3 ನಿಮಿಷಗಳವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಇಡಬೇಕು. ಹೀಗೆ ಮಾಡಿದರೆ ರಬ್ಬರ್ ಮತ್ತೆ ತನ್ನ ಮೊದಲಿನ ಗಾತ್ರಕ್ಕೆ ಬರುತ್ತದೆ.
ನಂತರ ಈ ರಬ್ಬರ್ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಸಿಂಪಡಿಸಿ. ಹೀಗೆ ಮಾಡಿದ ಮೇಲೆ ರಬ್ಬರ್ ಮತ್ತೆ ಕುಕ್ಕರ್ ಮುಚ್ಚಲಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಮತ್ತೆ ಸಿಲೆ ಹೊಡೆಯಲು ಆರಂಭಿಸುತ್ತದೆ.
ಇನ್ನೊಂದು ವಿಧಾನ ಎಂದರೆ ಕುಕ್ಕರ್ ಗ್ಯಾಸ್ಕೆಟ್ ಅನ್ನು 10 ನಿಮಿಷಗಳವರೆಗೆ ಫ್ರಿಜ್ ಒಳಗೆ ಇಡುವುದು. ಹೀಗೆ ಮಾಡಿದಾಗಲೂ ಲೂಸ್ ಆಗಿರುವ ರಬ್ಬರ್ ಮತ್ತೆ ತನ್ನ ಗಾತ್ರಕ್ಕೆ ಮರಳುತ್ತದೆ
ಕುಕರ್ ರಬ್ಬರ್ ಸಡಿಲವಾಗಿದೆ ಎಂದು ತಕ್ಷಣ ಎಸೆಯುವ ಮುನ್ನ ಈ ಟ್ರಿಕ್ ಬಳಸಿದರೆ ನಿಮ್ಮ ಸಮಸ್ಯೆ ಸುಲಭವಾಗಿ ಪರಿಹಾರವಾಗಬಹುದು.