ಕಾಸರಗೋಡು: ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಸಮಾಜದಲ್ಲಿ ಆತಂಕಕ್ಕೆ ಕಾರಣವಾಗುತ್ತಿದ್ದು, ಕಾಯಿಲೆ ವಿರುದ್ಧ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಲಯನ್ಸ್ ಜಿಲ್ಲಾ ಮಧುಮೇಹ ವಿಭಾಗ ಸಂಯೋಜಕ ಲಯನ್ ಕೆ.ಕೆ ಸೆಲ್ವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಭಿಯಾನದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಫೆ.15 ರಂದು ಮಧ್ಯಾಹ್ನ 03.30ಕ್ಕೆ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಲೆಯಲ್ಲಿ ಜರುಗಲಿರುವುದು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಉದ್ಘಾಟಿಸುವರು.
ಮಕ್ಕಳು ಅತಿಯಾದ ಸಿಹಿ ಬಳಕೆಯಿಂದ ಉಂಟಾಗುವ ದುಷ್ಪರಿಣಾಮದ ವಿರುದ್ಧ ಜಿಲ್ಲಾಡಳಿತ, ಜಿಲ್ಲಾ ಆಹಾರ ಭದ್ರತಾ ಇಲಾಖೆ ಹಾಗೂ ಲಯನ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಲಘು ಪಾನೀಯಗಳಲ್ಲಿ ಒಳಗೊಂಡಿರುವ ಸಕ್ಕರೆ ಅಮಸವನ್ನು ಸೂಚಿಸುವ 'ಶುಗರ್ ಬೋರ್ಡ್'ನ್ನು ಜಿಲ್ಲೆಯ ಎಲ್ಲಾ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ನಮೂದಿಸಿರುವ ಅಳವಡಿಸಲು ಪ್ರಯತ್ನಿಸುವುದಾಗಿ ಆಹಾರ ಸುರಕ್ಷತಾ ಇಲಾಖೆ ಈಗಾಗಲೇ ಭರವಸೆ ನೀಡಿದೆ. ಮೊದಲ ಹಂತದಲ್ಲಿ ಸುಮಾರು 40 ಶಾಲೆಗಳಲ್ಲಿ ಬೋರ್ಡ್ ಸ್ಥಾಪಿಸಲು ಲಯನ್ಸ್ ಇಂಟರ್‍ನ್ಯಾಷನಲ್‍ನ ಡಿಸ್ಟ್ರಿಕ್ಟ್ 318 ಇ ಅಧಿಕಾರಿಗಳು ಜವಾಬ್ದರಿ ವಹಿಸಿಕೊಂಡಿರುವುದಗಿ ತಿಳಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ಸಿಹಿ ಸೇವನೆಯು ಮಧುಮೇಹದ ಜತೆಗೆ ಬೊಜ್ಜು ಬೆಳವಣಿಗೆ, ಹೃದ್ರೋಗ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಐಸಿಎಂಆರ್ ಪ್ರಕಾರ ಪ್ರತಿ ವ್ಯಕ್ತಿಗೆ ದಿನಕ್ಕೆ 25 ಗ್ರಾಂ ಸಕ್ಕರೆ ಶಿಫಾರಸುಮಾಡುತ್ತಿದ್ದು, ಇದು ಸಾಮಾನ್ಯವಾಗಿ ಎರಡು ಬೆಳಗಿನ ಚಹಾ ಅಥವಾ ಕಾಫಿಯೊಂದಿಗೆ ಲಭ್ಯವಾಗುತ್ತದೆ. ಆದರೆ ತಂಪು ಪಾನೀಯಗಳಲ್ಲಿ ಶೇ.10ರಿಂದ 15ರಷ್ಟು ಸಕ್ಕರೆ ಅಂಶ ಇರುತ್ತದೆ. 300 ಮಿಲಿ ಸಿಹಿ ಪಾನೀಯಗಳಲ್ಲಿ 21 ಗ್ರಾಂನಿಂದ 42 ಗ್ರಾಂ ಸಕ್ಕರೆ ನಮ್ಮ ದೇಹವನ್ನು ತಲುಪುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಲಯನ್ ಫಾರೂಕ್ ಕಾಸ್ಮಿ, ಡಾ. ಅಬಿದ್ ನಲಪ್ಪಾಡ್ ಉಪಸ್ಥಿತರಿದ್ದರು.