ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಮುಳಿಯಾರು ಪಂಚಾಯತಿ ವ್ಯಾಪ್ತಿಯ ಮುಂಡಕೈ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಮುಂಡಕೈ ಶ್ರೀ ಅಯ್ಯಪ್ಪಭಜನಾ ಮಂದಿರದಲ್ಲಿ ಭಾನುವಾರ ಜರಗಿತು.
ರವೀಂದ್ರನ್ ಎಂ ಪಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಮೊದಲಪ್ಪಾರ ಉದ್ಘಾಟಿಸಿದರು. ಸೀತಾರಾಮ ಬಳ್ಳುಳ್ಳಾಯ ಶುಭಾಶಂಸನೆಗೈದರು. ರಾಜನ್ ಮುಳಿಯಾರು, ಬಿಂದು ಶ್ರೀಧರನ್ ಸಾಂದರ್ಭಿಕ ಮಾತುಗಳನ್ನಾಡಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿದರು. ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು.
ರಕ್ಷಾಧಿಕಾರಿಯಾಗಿ ರಮೇಶನ್ ಮೊದಲಪ್ಪಾರ, ಕುಮಾರನ್ ಪಾರಚ್ಚಾಲ್, ರಾಮದಾಸ್ ಕೊಡವಂಚಿ, ವಿಶ್ವಂಬರನ್, ಅಧ್ಯಕ್ಷ ಉಪೇಂದ್ರನ್ ಎಂ.ಪಿ, ಉಪಾಧ್ಯಕ್ಷರಾಗಿ ಕುಂಜುಣ್ಣಿ ಎಂ.ಕೆ, ರವೀಂದ್ರನ್ ಎಂ.ಕೆ., ರತೀಶ್ ಮುಲ್ಲಚ್ಚೇರಿಯಡ್ಕಮ್, ಕಾರ್ಯದರ್ಶಿಯಾಗಿ ರತೀಶ್ ಎಂ.ಆರ್. ಚವಿರಿಕ್ಕುಳಂ, ಜೊತೆ ಕಾರ್ಯದರ್ಶಿಗಳಾಗಿ ಪ್ರಭಾಕರನ್ ಎಂ.ಕೆ, ಚಂದ್ರನ್ ಪಾರಚ್ಚಾಲ್, ಸೂರಜ್ ಆಲನಡ್ಕ, ಖಜಾಂಚಿಯಾಗಿ ರವೀಂದ್ರನ್ ಎಂಪಿ, ಮಹಿಳಾ ಸಮಿತಿ ರಕ್ಷಾಧಿಕಾರಿಯಾಗಿ ಬಿಂದು ಶ್ರೀಧರನ್, ಮಾಧವಿ ಕೆಕೆ ಮೂಲ, ಅಧ್ಯಕ್ಷೆಯಾಗಿ ರಾಧಾ ಕುಮಾರನ್, ಉಪಾಧ್ಯಕ್ಷೆಯಾಗಿ ಪ್ರಿಯ ಉಪೇಂದ್ರ, ಶ್ರುತಿ ವಿಜಯನ್, ಕಾರ್ಯದರ್ಶಿ ರೋಹಿಣಿ ಸತೀಶನ್, ಜಂಟಿ ಕಾರ್ಯದರ್ಶಿಗಳಾಗಿ ಶ್ಯಾಮಲಾ ಕುಮಾರನ್, ಪ್ರೀತಿ ರಾಜೇಂದ್ರನ್, ದೀಪಾ ಮನೋಜ್ ಮತ್ತು ಇತರ ಸದಸ್ಯರನ್ನು ಆಯ್ಕೆಮಾಡಲಾಯಿತು. ಪ್ರಧಾನ ಸಂಯೋಜಕಾರಾಗಿ ರಿಜೇಶ್ ಕೊಡವಂಚಿ ಅವರನ್ನು ಆಯ್ಕೆ ಮಾಡಲಾಯಿತು,