ಕೈರೋ: ಗಾಜಾ ಕದನ ವಿರಾಮ ಒಪ್ಪಂದಕ್ಕೆ ಸಿದ್ಧವಿರುವುದಾಗಿ ಪ್ಯಾಲೆಸ್ಟೀನಿಯನ್‌ನ ಹಮಾಸ್ ಸಂಘಟನೆ ಶನಿವಾರ ಹೇಳಿಕೆ ನೀಡಿದೆ.
ಇಸ್ರೇಲಿ ಪಡೆಗಳ ಸಂಪೂರ್ಣ ವಾಪಸಾತಿ ಹಾಗೂ ಶಾಶ್ವತ ಕದನ ವಿರಾಮ ಸಾಧಿಸುವ ನಿಟ್ಟಿನಲ್ಲಿ ಒತ್ತೆಯಾಳುಗಳು, ಯುದ್ಧಕೈದಿಗಳ ವಿನಿಮಯಕ್ಕೆ ಬದ್ಧವಾಗಿರುವುದಾಗಿಯೂ ಹೇಳಿದೆ.
ಗಾಜಾದಲ್ಲಿ ಒತ್ತೆ ಇರಿಸಿಕೊಂಡಿದ್ದ ಇಬ್ಬರು ಇಸ್ರೇಲ್ ಪ್ರಜೆಗಳಾದ ತಾಲ್ ಶೋಹಮ್ ಮತ್ತು ಅವೆರಾ ಮೆಂಗಿಸ್ಟೋ ಅವರನ್ನು ರಫಾ ನಗರದಲ್ಲಿ ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಪ್ರತಿನಿಧಿಗಳಿಗೆ ಹಮಾಸ್ ಹಸ್ತಾಂತರಿಸಿದೆ.
ಇಸ್ರೇಲ್‌ನ ಒತ್ತೆಯಾಳುಗಳನ್ನು ಹಮಾಸ್ ಕೂಡಲೇ ಬಿಡುಗಡೆ ಮಾಡದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದವಾರ ಎಚ್ಚರಿಕೆ ನೀಡಿದ್ದರು.