HEALTH TIPS

ನಿರ್ಧಾರ ಪರಿಶೀಲನೆಗೆ ಒತ್ತಾಯಿಸಿ: ಡಬ್ಲ್ಯುಎಚ್‌ಒ ಮುಖ್ಯಸ್ಥ

ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್‌ಒ) ಹೊರಹೋಗಿರುವ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಅಮೆರಿಕವನ್ನು ಒತ್ತಾಯಿಸಿ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೋಸ್‌ ಅದನೊಮ್ ಗೆಬ್ರಿಯೆಸಸ್‌ ಅವರು ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.

ಕಳೆದ ಬುಧವಾರ ಸದಸ್ಯ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಅತಿ ದೊಡ್ಡ ದೇಣಿಗೆದಾರ ಅಮೆರಿಕದ ನಿರ್ಗಮನದ ನಂತರ ಖರ್ಚು-ವೆಚ್ಚ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜರ್ಮನಿ ರಾಜತಾಂತ್ರಿಕ ಅಧಿಕಾರಿ ಬ್ಯೋರ್ನ್ ಕಮೆಲ್‌ ಅವರು, 'ಮನೆಯ ಸೂರಿಗೆ ಬೆಂಕಿ ಬಿದ್ದಿದೆ. ಆದಷ್ಟು ಬೇಗನೆ ಬೆಂಕಿಯನ್ನು ಆರಿಸಬೇಕಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

2024-25ನೇ ಸಾಲಿನಲ್ಲಿ ಅಮೆರಿಕ ಡಬ್ಲ್ಯುಎಚ್‌ಒಗೆ ₹8.6 ಲಕ್ಷ ಕೋಟಿ ದೇಣಿಗೆ ನೀಡಿತ್ತು. ಇದು ಡಬ್ಲ್ಯುಎಚ್‌ಒನ ಬಜೆಟ್‌ನ ಶೇ 14ರಷ್ಟು.

ಡಬ್ಲ್ಯುಎಚ್‌ಒದ ಆರೋಗ್ಯ ತುರ್ತು ಕಾರ್ಯಕ್ರಮಗಳು ಅಮೆರಿಕವನ್ನು ಅವಲಂಬಿಸಿವೆ ಎಂದು ಬಜೆಟ್ ದಾಖಲೆಗಳು ಹೇಳುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries