ಬದಿಯಡ್ಕ: ಉದ್ಯಮಿ ಕೊಡುಗೈದಾನಿ ಕುಳೂರು ಸದಾಶಿವ ಶೆಟ್ಟಿ ಕನ್ಯಾನ ಅವರು ಜೀರ್ಣೋದ್ಧಾರಗೊಳ್ಳುತ್ತಿರುವ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ದೇವಸ್ಥಾನಗಳು ಜೀರ್ಣೋದ್ಧಾರಗೊಂಡಾಗ ಊರು ಪ್ರಗತಿಯನ್ನು ಕಾಣುತ್ತದೆ. ಸನಾತನ ಧರ್ಮಕ್ಕೆ ಪೂರಕವಾದ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ತಿಳಿಸುತ್ತಾ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ನೆರವನ್ನು ನೀಡುವುದಾಗಿ ತಿಳಿಸಿದರು.
ಉದ್ಯಮಿ ಮಧುಸೂದನ ಆಯರ್ ಮಂಗಳೂರು, ಸಿ.ಎಚ್. ವಿಜಯನ್ ನಾಯರ್, ಗೋಪಾಲಾಚಾರಿ, ರಾಮಚಂದ್ರ ವೋರ್ಕೋಡ್ಲು, ರವಿಶಂಕರ ವಾಲ್ತಾಜೆ, ಸಂತೋಷ್ ಚಂದ್ರಂಪಾರೆ, ಜಯರಾಮ ಕೋಟೂರು ಉಪಸ್ಥಿತರಿದ್ದರು. ಪಿ.ಆರ್. ಸುನಿಲ್ ಸ್ವಾಗತಿಸಿ, ರತ್ನಾಕರ ಆಳ್ವ ವಂದಿಸಿದರು.