ಕಾಸರಗೋಡು: ಪನತ್ತಡಿ ಗ್ರಾಮದ ಬಳಾಂತೋಡ್ ಮುಂಡಾನ್‍ಮೂಲೆಯಲ್ಲಿ ವಾಸ್ತವ್ಯವಿರುವ ಹಿರಿಯ ಮತದಾರ, 105 ವರ್ಷ ಪ್ರಾಯದ ವೆಂಕಪ್ಪ ನಾಯ್ಕ್ ಅವರನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು. ಮುಂಡಾನ್‍ಮೂಲೆಯ ಅವರ ಮನೆ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರತೀಕ ಜೈನ್ ಶಾಲುಹೊದಿಸಿ, ಸಮರಣಿಕೆ ನೀಡಿ ವೆಂಕಪ್ಪ ನಾಯ್ಕ್ ಅವರನ್ನು ಗೌರವಿಸಿದರು. ಪನತ್ತಡಿ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೀತಿ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯ ಕೆ.ಕೆ.ವೇಣುಗೋಪಾಲನ್, ಕೆ.ಜೆ.ಜೇಮ್ಸ್, ಪರಪ್ಪ ಗಿರಿ ಜನ ಅಭಿವೃದ್ಧಿಅಧಿಕಾರಿ ಅಬ್ದುಲ್‍ಸಲಾಂ, ವೆಂಕಪ್ಪ ನಾಯ್ಕ್ ಅವರ ಪುತ್ರ ಹಾಗೂ ನಿವೃತ್ತ ಕಾರ್ಮಿಕ ಅಧಿಕಾರಿ ಎನ್. ಕೇಶವನ್ ಮೊದಲಾದವರು ಉಪಸ್ಥಿತರಿದ್ದರು. ವೆಳ್ಳರಿಕುಂಡ್ ತಾಲೂಕು ತಹಸೀಲ್ದಾರ್ ಪಿ.ವಿ.ಮುರಳಿ ಸ್ವಾಗತಿಸಿದರು. ಬೂತ್ ಮಟ್ಟದ ಅಧಿಕಾರಿ ಪ್ರಸೀದಾ ವಂದಿಸಿದರು.