ಇಂಫಾಲ: ಮಣಿಪುರದ ನಿಷೇಧಿತ ಮೂರು ಸಂಘಟನೆಗಳ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ್ದ ಓರ್ವ ಸದಸ್ಯನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ICC Rankings | ಬಾಬರ್ ಹಿಂದಿಕ್ಕಿದ ಗಿಲ್ ನಂ.1; ಅಗ್ರ 10ರಲ್ಲಿ ಭಾರತದ ನಾಲ್ವರುದೆಹಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ: ಕೇಂದ್ರದ ವೀಕ್ಷಕರನ್ನು ನೇಮಿಸಿದ ಬಿಜೆಪಿ
ಪಶ್ಚಿಮ ಮತ್ತು ಪೂರ್ವ ಇಂಫಾಲ, ಬಿಷ್ಣುಪುರ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಇಬ್ಬರು ಸದಸ್ಯನನ್ನು, ಪ್ರೆಪಾಕ್ (ಪ್ರೊ) ಸಂಘಟನೆಯ ಮೂವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಉಗ್ರರು 'ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಆಸ್ಪತ್ರೆ, ಶಾಲೆ ಮತ್ತು ಪೆಟ್ರೋಲ್ ಪಂಪ್‌ಗಳಿಂದ ಸುಲಿಗೆ ಮಾಡುತ್ತಿದ್ದರು'ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಉಗ್ರರಿಂದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.