ಕಾಸರಗೋಡು: ಕೋಟಿಕುಳಂ ಮುಸ್ಲಿಂ ಜಮಾಅತ್ ಮಸೀದಿ ಜನರಲ್‍ಬಾಡಿ ಸಭೆಯಲ್ಲಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು, ಈ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಸೀದಿ ಸಮಿತಿ ಅಧ್ಯಕ್ಷ ಕಾಪ್ಪಿಲ್ ಮಹಮ್ಮದ್ ಪಾಶಾ ನೀಡಿದ ದೂರಿನ ಮೇರೆಗೆ ಸಾಜಿಶ್ ಜಿನ್ನ ಎಂಬಾತನ ವಿರುದ್ಧ ಈ ಕೇಸು. ಮಸೀದಿ ಸಮಿತಿ ಕಾರ್ಯದರ್ಶಿ ಆರ್ಥಿಕ ಅವ್ಯವಹಾರ ನಡೆಸಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಸಂದರ್ಭ ವಾಗ್ವಾದ ನಡೆದು ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದೆ.