ಮುಳ್ಳೇರಿಯ: ಜಿಲ್ಲೆಯ ಪ್ರಸಿದ್ಧ ಪೈಕ ಮಣವಾಟಿ ಬೀವಿ ಉರುಸ್‍ಗೆ ಸಮಿತಿ ಅಧ್ಯಕ್ಷ ಹನೀಫ್ ಕರಿಂಗಪಾಲಂ ಧ್ವಜಾರೋಹಣ ನೆರವೇರಿಸುವ ಮೂಲಕ ಚಲನೆ ನೀಡಿದರು. ಪೈಕ ಜಮಾಅತ್ ಖಾಝಿ ಮುಹಮ್ಮದ್ ತಂಗಳ್ ಮದನಿ ಪ್ರಾರ್ಥನೆ ನಡೆಸಿದರು. ಮುದರಿಸ್ ಉಸ್ಮಾನ್ ರಾಝಿ ಬಾಖವಿ ಐತಮಿ, ಉರುಸಮಿತಿ ಪದಾಧಿಕಾರಿಗಳಾದ ಹಾಜಿ ಪಿ.ಎಂ.ಮುಹಮ್ಮದ್ ಕುಞÂ, ಜೆ.ಪಿ.ಅಬ್ದುಲ್ಲಾ, ಬಿ.ಎ.ಹಮೀದ್ ಹಾಜಿ, ಬಿ.ಕುಞËಮು ಹಾಜಿ, ಖಾಲಿದ್ ಹಾಜಿ ಕೊಯಿರ್ಕೊಚ್ಚಿ, ಬಿ.ಎ.ಅಬ್ದುರ್ ರಝಾಕ್, ರಹೀಂ ಜಿಮ್ಮು, ಇಬ್ರಾಹಿಂ ಕೊಯಿರ್ಕೊಚ್ಚಿ, ಹಿಲ್ಟನ್ ಅಬ್ದುಲ್ಲಾ, ಅಬೂಬಕರ್, ಅಬ್ದುಲ್ಲಾ ಕೊಯಿರ್ಕೊಚ್ಚಿ, ನೂರುದ್ದೀನ್ ಪರಕುನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಸಂಚಾಲಕ ಅಶ್ರಫ್ ಬಸ್ಮಳ ಸ್ವಾಗತಿಸಿದರು. ಕಾರ್ಯಕಾರಿ ಸಂಚಾಲಕ ಬಿ.ಕೆ.ಬಶೀರ್ ಪೈಕ ವಂದಿಸಿದರು. ಧಾರ್ಮಿಕ ಪ್ರವಚನ ಕರ್ಯಕ್ರಮಗಳಿನ್ನು ಉಲಮಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಉದ್ಘಾಟಿಸಿದರು ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಅಧ್ಯಕ್ಷ ಸೈಯದ್ ಮೊಹಮ್ಮದ್ ತಙಳ್ ಮದನಿ ಅಧ್ಯಕ್ಷತೆ ವಹಿಸಿದ್ದರು.ಪೈಕ ಮುದರಿಸ್ ಉಸ್ಮಾನ್ ನಾಸಿ ಬಾಖವಿ ಹೈತಮಿ ಮುಖ್ಯ ಭಾಷಣ ಮಾಡಿದರು.