ಚೆನ್ನೈ: ಡಿಎಂಕೆ ನಾಯಕ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಅವರು ನಟ, 'ಮಕ್ಕಳ್ ನೀಧಿ ಮೈಯಂ'(ಎಂಎನ್‌ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರನ್ನು ಬುಧವಾರ ಭೇಟಿಯಾಗಿದ್ದಾರೆ.
ಡಿಎಂಕೆಯು ಕಮಲ್ ಹಾಸನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿಗೆ ಈ ಭೇಟಿ ಮತ್ತಷ್ಟು ಪುಷ್ಟಿ ನೀಡಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಜೊತೆ ಎಂಎನ್‌ಎಂ ಮೈತ್ರಿ ಮಾಡಿಕೊಂಡಿತ್ತು. ಆ ವೇಳೆ ಕಮಲ್ ಹಾಸನ್ ಅವರಿಗೆ ರಾಜ್ಯಸಭಾ ಸ್ಥಾನ ಕೊಡುವ ಬಗ್ಗೆ ಒಪ್ಪಂದವಾಗಿದೆ ಎನ್ನಲಾಗಿದೆ.
2018ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಕಮಲ್ ಹಾಸನ್ ಅವರು ನಂತರ ಬಂದ ಚುನಾವಣೆಗಳಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ.
2025ರ ಜುಲೈ 24ರಂದು ರಾಜ್ಯಸಭಾ ಸದಸ್ಯರಾದ ರಾಮದಾಸ್ (ಪಿಎಂಕೆ), ಎಂ ಷಣ್ಮುಗಂ (ಡಿಎಂಕೆ), ಎನ್ ಚಂದ್ರಶೇಖರನ್ (ಎಐಎಡಿಎಂಕೆ), ಎಂ ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ), ಪಿ ವಿಲ್ಸನ್ (ಡಿಎಂಕೆ), ಮತ್ತು ವೈಕೊ (ಎಂಡಿಎಂಕೆ) ನಿವೃತ್ತರಾಗಲಿದ್ದಾರೆ.