ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ನಿರ್ದೇಶಕರಾದ ಕಾಶ್ ಪಟೇಲ್ ಅವರು ಸೋಮವಾರ ಮದ್ಯ, ಮಾದಕವಸ್ತು, ಶಸ್ತ್ರಾಸ್ತ್ರಗಳ ಮಂಡಳಿಯ (ಎಟಿಎಫ್) ಪ್ರಭಾರ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.
ಎಟಿಎಫ್ ಕೇಂದ್ರ ಕಚೇರಿಯಲ್ಲಿ ಅವರು ಅಧಿಕಾರ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.
ಆದರೆ, ನೇಮಕಾತಿ ಕುರಿತು ನ್ಯಾಯಾಂಗ ಇಲಾಖೆ ಹಾಗೂ ಶ್ವೇತಭವನದ ಅಧಿಕಾರಿಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಪ್ರಸ್ತುತ ಅಂದಾಜು 5,500 ಸಿಬ್ಬಂದಿ ಇರುವ ಹಾಗೂ ಶಸ್ತ್ರಾಸ್ತ್ರಗಳು, ಸ್ಫೋಟಕಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರುವ ಹೊಣೆ ಹೊತ್ತ ಇಲಾಖೆಯ ಮೇಲ್ವಿಚಾರಣೆಯನ್ನು ಅವರು ನಿಭಾಯಿಸಲಿದ್ದಾರೆ.