ಮಂಜೇಶ್ವರ: ಕನ್ಯಾನ ಸದಾಶಿವ ಶೆಟ್ಟಿ ಸೇವಾ ಬಳಗ ಕೆಂದ್ರೀಯ ಸಮಿತಿಯ ವತಿಯಿಂದ ಚಿಗುರುಪಾದೆ ಮೀಂಜ ಬಂಟರ ಸಂಘದ ಮೈದಾನದಲ್ಲಿ ಜರಗಿದ ಸದಾಶಿವ ಸೇವಾ ಹಸ್ತ ವಿತರಣೆ ಉಚಿತ ಆರೋಗ್ಯ ವಿಮೆ ಉದ್ಘಾಟ£, ಅಭಿನಂದನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಸಾಮರಸ್ಯದ ಸಂದೇಶವನ್ನು ನೀಡುವ ಸದಾಶಿವ ಶೆಟ್ಟರ ಹುಟ್ಟೂರ ಸನ್ಮಾನದ ವೇದಿಕೆ ಎಲ್ಲರಿಗೂ ಮಾದರಿ. ಜಾತಿ, ಮತ, ಪಂಗಡವನ್ನು ಒಂದೇ ದಾರದಲ್ಲಿ ಪೋಣಿಸಿ ಸಮಾಜಕ್ಕೆ ಅರ್ಪಿಸಿದಂತಿದೆ. ವ್ಯಕ್ತಿತ್ವದ ಶೋಭೆಗೆ ದಾನವೇ ಭೂಷಣ. ದಾನಗಳು ಯೋಗ್ಯ ಕರಗಳಿಗೆ ಪ್ರಾಪ್ತವಾಗಬೇಕು. ಸೇವೆಯಿಂದ ಪ್ರಶಸ್ತಿಗಳಿಗೆ ಬೆಲೆ ಬರುತ್ತದೆ ಎಂದು ಆಶೀರ್ವಚನ ನೀಡಿದರು.
ಕೇರಳ ವಿಧಾನ ಸಭಾ ಅಧ್ಯಕ್ಷ ಎ.ಎನ್ ಶಂಶೀರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕುಂಬಳೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಮುಂಡಪಳ್ಳ ಇದರ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ ಕುತ್ತಿಕ್ಕಾರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಲೋಷಿಯಸ್ ಡೀಮ್ಡ್ ವಿಶ್ವವಿದ್ಯಾಲಯದ ಸಹ.ಚಾನ್ಸಲರ್ ರೆವೆ.ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ.ಎಸ್.ಜೆ, ಕೃμÁ್ಣಪುರದ ಚೊಕ್ಕಬೆಟ್ಟು ಉಸ್ತಾದ್ ಅಝೀಝ್ ದಾರಿಮಿ,ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯಕ್ಷದ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ತಿಂಬರ ಸಂಜೀವ ಶೆಟ್ಟಿ, ಸುಜಾತ ಸದಾಶಿವ ಶೆಟ್ಟಿ, ಐ ಸುಬ್ಬಯ್ಯ ರೈ, ಮೋಹನ ಶೆಟ್ಟಿ ಮಜ್ಜಾರು, ಸುಂದರಿ ಶೆಟ್ಟಿ, ಅಶ್ವಿನಿ ಎಂ ಎಲ್ ಪಜ್ವ, ಕೆ ಆರ್ ಜಯಾನಂದ, ಡಾ.ಜಯಪ್ರಕಾಶ ನಾರಾಯಣ್ ತೊಟ್ಟತ್ತೋಡಿ, ಪಿ ಆರ್ ಶೆಟ್ಟಿ ಪೊಯ್ಯೇಲು , ಸದಾಶಿವ ಆಳ್ವ ತಲಪಾಡಿ, ದಯಾಸಾಗರ್ ಚೌಟ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 6,500 ಕ್ಕಿಂತಲೂ ಹೆಚ್ಚು ಜನರು ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು. ಕನ್ಯಾನ ಸದಾಶಿವ ಶೆಟ್ಟಿಯವರನ್ನು ನೆರೆದಿರುವ ಗಣ್ಯರ ಸಮಕ್ಷಮ ಅವರು ಮಾಡುವ ಸಮಾಜಮುಖಿ ಕಾರ್ಯಕ್ಕೆ ಸೇವಾ ಬಳಗದ ವತಿಯಿಂದ ವಿಶಿಷ್ಟ ರೀತಿಯಲ್ಲಿ ಅಭಿವಂದನಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಆಂಬುಲೆನ್ಸ್, ಶಾಲಾ ವಾಹನ ವಿವಿಧ ರೋಗಿಗಳಿಗೆ ಆರೋಗ್ಯ ನಿಧಿ, ಶಿಕ್ಷಣ ನೆರವು ಕೃತಕ ಅಂಗಾಂಗ, ಅಸ್ವಸ್ತ ಕುಟುಂಬಗಳಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಬಗೆ ಬಗೆಯ ತಿಂಡಿ,ತಿನಿಸುಗಳು,ಭೋಜನಗಳು ಹಾಗೂ ಅಂತರಾಷ್ಟ್ರೀಯ ಮಟ್ಟದ ಗಾಯಕರಿಂದ ಗಾನ ವೈಭವ ,ನೃತ್ಯ ಕಾರ್ಯಕ್ರಮ ಹಾಗೂ ಜೋಡು ದೀಟಿಗೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಕೆ ಪುರುಷೋತ್ತಮ ಭಂಡಾರಿ ಮತ್ತು ಡಾ. ಮಮತಾ ಪಿ ಶೆಟ್ಟಿ ಅಭಿಮತ ಟಿ.ವಿ ನಿರೂಪಿಸಿದರು.