ಚಂಡೀಗಢ: ದೇಶದಾದ್ಯಂತ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಶೀಘ್ರವೇ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಈ ಸಮಿತಿ ಮೂಲಕ ನೈಸರ್ಗಿಕ ಕೃಷಿ ಅಳವಡಿಕೆಗೆ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುವುದು.
ಜತೆಗೆ, ಅಗತ್ಯ ತರಬೇತಿ ಕೂಡ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರೈತರು ಸರಿಯಾಗಿ ಈ ಕೃಷಿ ಪದ್ಧತಿ ಅನುಸರಿಸಿದರೆ ಅವರ ಆದಾಯವಷ್ಟೇ ಹೆಚ್ಚಳವಾಗುವುದಿಲ್ಲ. ಮಣ್ಣಿನ ಫಲವತ್ತತೆ ಕೂಡ ವೃದ್ಧಿಸಲಿದೆ. ದೇಶದ ನಾಗರಿಕರಿಗೆ ರಾಸಾಯನಿಕ ಮತ್ತು ಕೀಟನಾಶಕ ಮುಕ್ತ ತರಕಾರಿ, ಧಾನ್ಯ ಮತ್ತು ಹಣ್ಣುಗಳು ದೊರೆಯಲಿವೆ ಎಂದು ಹೇಳಿದ್ದಾರೆ.