ಕಣ್ಣೂರು: ಸಂಸ್ಕøತ ಭಾಷೆಯ ಮಹತ್ವ ಹಾಗೂ ಪ್ರಾಧಾನ್ಯವನ್ನು ನವ ತಲೆಮಾರು ಅರ್ಥೈಸಬೇಕು ಎಂದು ಕಣ್ಣೂರು ಕಾರ್ಪೋರೇಶನ್ ಡೆಪ್ಯುಟಿ ಮೇಯರ್ ಅಡ್ವ. ಪಿ. ಇಂದಿರಾ ಕರೆ ನೀಡಿದ್ದಾರೆ.
ವಿಶ್ವ ಸಂಸ್ಕೃತ ಪ್ರತಿಷ್ಠಾನಂ ಆಶ್ರಯದಲ್ಲಿ ಕಣ್ಣೂರು ಜಿಲ್ಲಾ ಪೋಲೀಸ್ ಸಹಕಾರಿ ಸಭಾಂಗಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ರಾಜ್ಯ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಕೃತ ಭಾರತಿ ಮಹಿಳಾ ವಿಭಾಗದ ಪ್ರಮುಖ ಡಾ. ಕೆ.ಎಸ್. ಬಿಂದುಶ್ರೀ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತಿ ಮಲಪ್ಪುರಂ ಜಿಲ್ಲಾಧ್ಯಕ್ಷೆ ಡಾ. ಸಿ.ಪಿ. ಶೈಲಜಾ ಮುಖ್ಯ ಭಾಷಣ ಮಾಡಿದರು.
ಡಾ. ಕೆ.ಎಸ್. ಜಯಶ್ರೀ (ರಾಜ್ಯ ಸಂಘಟನಾ ಕಾರ್ಯದರ್ಶಿ, ಭಾರತೀಯ ಸ್ತ್ರೀ ಶಕ್ತಿ ಕೇರಳ), ಅಡ್ವ. ಕೆ.ಎಸ್. ಶ್ರೀಕಲಾ (ರಾಜ್ಯ ಕಾರ್ಯದರ್ಶಿ, ರಾಷ್ಟ್ರ ಸೇವಿಕಾ ಸಮಿತಿ ಕೇರಳ), ಪಿ.ಯು. ರಮ್ಯಾ (ಜಿಲ್ಲಾ ಕಾರ್ಯದರ್ಶಿ, ಕೇರಳ ಸಂಸ್ಕೃತ ಶಿಕ್ಷಕರ ಒಕ್ಕೂಟ) ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಜೆ. ವಂದನಾ (ಶಾರದಾ ಗುರುಕುಲಂ-ಚೆಮ್ಮಂಡ ಇರಿಂಞಲಕುಡ- ತ್ರಿಶೂರ್) ಮಾತನಾಡಿದರು.