ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ 9ನೇ ಮವ್ವಾರು ಸಮೀಪದ ನಡುವಂಗಡಿಯಲ್ಲಿರುವ ಸಾರ್ವಜನಿಕ ಸ್ಮಶಾನದ ಸುತ್ತು ಮುತ್ತಲು ಕೆಎಸ್‍ಟಿಪಿ ರಸ್ತೆ ಕಾಮಗಾರಿಗೋಸ್ಕರ ತಂದಿರಿಸಿದ ಜಲ್ಲಿಗಳನ್ನು ತರೆವುಗೊಳಿಸದೇ ಈ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ. ಅಲ್ಲದೇ ಸ್ಮಶಾನದ ಸುತ್ತು ಗೋಡೆ ಹಾನಿಗೊಳಿಸಿದ್ದಾರೆ. ಈ ಹಿಂದೆ ಹಲವು ದೂರು ನೀಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ ಶೀಘ್ರ ಕ್ರಮ ಕೈಗೊಳ್ಳಬೇಕಾಗಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬಿಜೆಪಿ ಬದಿಯಡ್ಕ ಮಂಡಲ ಕಾರ್ಯದರ್ಶಿ ಹರೀಶ ಗೋಸಾಡ ದೂರು ನೀಡಿದ್ದಾರೆ.
ಜೊತೆಗೆ ಕುಂಬ್ಡಾಜೆ ಪಂಚಾಯಿತಿಯ 12ನೇ ವಾರ್ಡು ಮಾವಿನಕಟ್ಟೆ ಬಳಿಯ ಮಸೀದಿಯ ಎದುರುಗಡೆ ಬಳ್ಳಪದವು ರಸ್ತೆಗೆ ತಾಗಿಕೊಂಡು ಕಾಂಕ್ರೀಟ್ ಕೆಲಸವನ್ನು ಸಹ ಸರಿಯಾದ ರೀತಿಯಲ್ಲಿ ನಿರ್ವಹಿಸಲಿಲ್ಲ. ಇದನ್ನು ಸರಿಪಡಿಸಲು ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಬೇಕು. ಶೀಘ್ರ ದುರಸ್ತಿ ಮಾಡಿಕೊಡಬೇಕಾಗಿ ಮನವಿ ಮೂಲಕ ಆಗ್ರಹಿಸಲಾಗಿದೆ.