ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಪೆರಾಜೆ ಮಾಣಿಮಠದಲ್ಲಿ ಇತ್ತೀಚೆಗೆ ಭೇಟಿಯಾಗಿ ಶ್ರೀಮಂದಿರಕ್ಕೆ ಆಗಮಿಸುವಂತೆ ವಿನಂತಿಸಿಕೊಂಡರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಸಲಹಾ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು ಶ್ರೀಗಳಿಗೆ ಹಾರಾರ್ಪಣೆಗೈದು ಫಲಪುಷ್ಪ ಕಾಣಿಕೆಗಳನ್ನಿತ್ತು ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಡಾ.ಬೇ ಸೀ ಗೋಪಾಲಕೃಷ್ಣ ಭಟ್, ಗಾಯತ್ರಿ ಜಿ ಭಟ್, ಶ್ಯಾಮ್ ಭಟ್ ಬೇರ್ಕಡವು, ಈಶ್ವರಿ ಬೇರ್ಕಡವು, ಉದಯ ಭಟ್ ಕೋಳಿಕ್ಕಜೆ, ಯುವವಿಭಾಗದ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ, ಶ್ರೀಮಂದಿರದ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ಜೊತೆಗಿದ್ದರು. ಮುಂದಿನ ದಿನಗಳಲ್ಲಿ ಕುಂಬಳೆ ಸೀಮೆಯ ಭೇಟಿಯ ಸಂದರ್ಭದಲ್ಲಿ ಚಿತ್ತೈಸುವುದಾಗಿ ತಿಳಿಸಿ ಮಂತ್ರಾಕ್ಷತೆಯನ್ನಿತ್ತು ಹರಸಿದರು.