ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 89ನೇ ಹಾಗೂ 90ನೆ ಯೋಜನೆಗಳನ್ನು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು. 89 ನೇ ಯೋಜನೆಯ ಫಲಾನುಭವಿ ಜಯರಾಜ್ ಅವರಿಗೆ ನೀಡಲಾಯಿತು. ಇವರು ಸುಮಾರು 15 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ನಡೆದಾಡಲು ಆಗದ ಪರಿಸ್ಥಿತಿ ಇದ್ದು, ಅವರ ಶೋಚನೀಯ ಸ್ಥಿತಿಯನ್ನು ಅರಿತ ಸಂಸ್ಥೆ, ಅವರಿಗೆ ಸದಸ್ಯರು ಒಟ್ಟು ಗೂಡಿಸಿದ ಮೊತ್ತವನ್ನು ನೀಡಲಾಯಿತು.
90 ನೇ ಯೋಜನೆಯ ಫಲಾನುಭವಿ ಚಿತ್ರಾವತಿ ಅವರಿಗೆ ನೀಡಲಾಯಿತು. ಅವರಿಗೆ ಸುಮಾರು ಹತ್ತು ವರುಷಗಳಿಂದ ಆನೆಕಾಲು ರೋಗ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಶೋಚನೀಯ ಸ್ಥಿತಿಯನ್ನು ಅರಿತ ಸಂಸ್ಥೆ ಅವರಿಗೆ ಸದಸ್ಯರು ನೀಡಿದ ಮೊತ್ತವನ್ನು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರಿಸಿದರು. ಈ ವೇಳೆ ರಾಜು ಅಮ್ಮ ಲಾಟರಿ ಅವರು ನೀಡಿದ ದಿನಸಿ ಸಾಮಗ್ರಿಗಳನ್ನು ಈ ಎರಡು ಕುಟುಂಬಗಳಿಗೆ ನೀಡಲಾಯಿತು. ಈ ವೇಳೆ ರೂಪೇಶ್ ಜೋಡುಕಲ್, ಪದ್ಮನಾಭ ತಲೇಕಲ, ಶರತ್ ಕಡಂಬಾರ್, ನಿತೇಶ್ ಪಜಿಂಗಾರ್, ಅಂಕಿತ್ ಪಾವೂರು, ಪ್ರದೀಪ್ ಮೊರತ್ತಣೆ ಉಪಸ್ಥಿತರಿದ್ದರು.