ನವದೆಹಲಿ: ಕಳಪೆ ವಾಯುವಿನ ಗುಣಮಟ್ಟದಿಂದಾಗಿ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಿಂದ ಮಧ್ಯದಲ್ಲೇ ಹೊರನಡೆಯಲು ನಿರ್ಧರಿಸಿದ್ದಾಗಿ 47 ವರ್ಷದ ಟೆಕ್ ಮಿಲಿಯನೇರ್ ಮತ್ತು ಆಯಂಟಿ ಏಜಿಂಗ್ ಅಡ್ವೊಕೇಟ್ ಬ್ರಿಯಾನ್ ಜಾನ್ಸನ್ ಅವರು ಬಹಿರಂಗಪಡಿಸಿದ್ದಾರೆ.
ತಮ್ಮ ಇತ್ತೀಚಿನ ಭಾರತ ಭೇಟಿಯ ಬಗ್ಗೆ ಮಾತನಾಡಿರುವ ಅವರು ಕಳಪೆ ವಾಯು ಗುಣಮಟ್ಟದಿಂದಾಗಿ ತಮ್ಮ ಗಂಟಲು ಮತ್ತು ಕಣ್ಣುಗಳಲ್ಲಿ ಉರಿಯ ಅನುಭವವಾಯಿತು. ಚರ್ಮದ ಮೇಲೆ ಗುಳ್ಳೆಗಳು ಎದ್ದವು ಎಂದು ಹೇಳಿದರು.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಕಾಮತ್ ಅವರೊಂದಿಗಿನ ತಮ್ಮ ಪಾಡ್‌ಕಾಸ್ಟ್ ಅನುಭವವನ್ನು ಹಂಚಿಕೊಂಡಿದ್ದಾರೆ. "ಭಾರತದಲ್ಲಿದ್ದಾಗ, ಕಳಪೆ ವಾಯುವಿನ ಗುಣಮಟ್ಟದಿಂದಾಗಿ ನಾನು ಈ ಪಾಡ್‌ಕಾಸ್ಟ್ ಅನ್ನು ಮೊದಲೇ ಕೊನೆಗೊಳಿಸಿದೆ. ನಿಖಿಲ್ ಕಾಮತ್ ಪಾಡ್‌ಕಾಸ್ಟ್ ಅನ್ನು ಬಹಳ ಉತ್ತಮವಾಗಿ ನಿಭಾಯಿಸುತ್ತಿದ್ದರು. ಕಾರ್ಯಕ್ರಮವು ಚೆನ್ನಾಗಿ ಮುಂದುವರಿಯುತ್ತಿತ್ತು. ನಾವು ಇದ್ದ ಕೋಣೆಗೆ ಕಳಪೆ ಗುಣಮಟ್ಟದ ಗಾಳಿತಾಗಿ ನಾನು ತಂದಿದ್ದ ಏರ್ ಪ್ಯೂರಿಫೈಯರ್ ಕೆಲಸ ಮಾಡುವುದು ನಿಲ್ಲಿಸಿತು" ಎಂದು ಹೇಳಿದ್ದಾರೆ.
ಪಾಡ್‌ಕಾಸ್ಟ್ ನಲ್ಲಿ, ಫೇಸ್ ಮಾಸ್ಕ್ ಧರಿಸಿ ಕಾಣಿಸಿಕೊಂಡ ಜಾನ್ಸನ್, ಭಾರತದಲ್ಲಿ ಹವಾಮಾನ ಗುಣಮಟ್ಟ ಎಷ್ಟು ಕೆಟ್ಟದಾಗಿದೆ ಎಂದು ಕೇಳಿದಾಗ ಒಬ್ಬರನ್ನು ನೋಡಲಾಗದಷ್ಟು ದಟ್ಟವಾದ ವಾಯು ಮಾಲಿನ್ಯವಿದೆ ಎಂದು ಹೇಳಿದ್ದಾರೆ.
ಪಾಡ್‌ಕಾಸ್ಟ್ ಚಿತ್ರೀಕರಣದ ಸಮಯದಲ್ಲಿ ತಮ್ಮ ಅನುಭವವನ್ನು ನೆನಪಿಸಿಕೊಂಡ ಜಾನ್ಸನ್, "ಒಳಗೆ, ವಾಯುಮಾಲಿನ್ಯವು 130 ರ ಮಟ್ಟದಲ್ಲಿತ್ತು. PM2.5 75 µg/m³ ಆಗಿತ್ತು. ಇದು 24 ಗಂಟೆಗಳ ಕಾಲ 3.4 ಸಿಗರೇಟ್ ಸೇದುವುದಕ್ಕೆ ಸಮಾನವಾಗಿದೆ" ಎಂದು ಹೇಳಿದ್ದಾರೆ.
"ಭಾರತದಲ್ಲಿ ಇದು ನನ್ನ ಮೂರನೇ ದಿನವಾಗಿತ್ತು. ವಾಯುಮಾಲಿನ್ಯವು ನನ್ನ ಚರ್ಮದಲ್ಲಿ ಗುಳ್ಳೆಗಳು ಮತ್ತು ನನ್ನ ಕಣ್ಣುಗಳು ಮತ್ತು ಗಂಟಲು ಉರಿಯುಂಟು ಮಾಡಿತು" ಎಂದು ಅವರು ಹೇಳಿದರು.
ವಾಯುಮಾಲಿನ್ಯವನ್ನು ಕ್ಯಾನ್ಸರ್‌ಗಿಂತ ದೊಡ್ಡ ಎಂದು ಎಂದು ವಿವರಿಸಿದ ಹೊಸ ಯುಗದ ಆರೋಗ್ಯ ರಕ್ಷಣೆಯಲ್ಲಿ ಲಕ್ಷಾಂತರ ಹೂಡಿಕೆ ಮಾಡಿರುವ ಜಾನ್ಸನ್, ಭಾರತವು ಕ್ಯಾನ್ಸರ್‌ಗಳನ್ನು ಗುಣಪಡಿಸುವುದಕ್ಕಿಂತ ವಾಯುವಿನ ಗುಣಮಟ್ಟವನ್ನು ಉತ್ತಮಗೊಳಿಸುವ ಮೂಲಕ ತನ್ನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು ಎಂದು ಉಲ್ಲೇಖಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಜಾನ್ಸನ್, ದೇಶದಲ್ಲಿ ವಾಯುಮಾಲಿನ್ಯವನ್ನು ಸಾಮಾನ್ಯ ಎಂಬಂತಾಗಿದೆ ಎಂಬುದರ ಕುರಿತು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ವಾಯುಮಾಲಿನ್ಯದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಜನರಲ್ಲಿ ಯಾವುದೇ ರೀತಿಯ ಕಳವಳವನ್ನು ನಾನು ಗಮನಿಸಲಿಲ್ಲ ಎಂದು ಅವರು ಹೇಳಿದ್ದಾರೆ.
"ಭಾರತದಲ್ಲಿ ವಾಯುಮಾಲಿನ್ಯವು ಎಷ್ಟು ಸಾಮಾನ್ಯವಾಗಿದೆಯೆಂದರೆ, ವೈಜ್ಞಾನಿಕವಾಗಿ ಅದರ ನಕಾರಾತ್ಮಕ ಪರಿಣಾಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಯಾರೂ ಅದನ್ನು ಗಮನಿಸುವುದಿಲ್ಲ. ಮಕ್ಕಳು ಸೇರಿದಂತೆ ಜನರು ಮಾಸ್ಕ್ ಧರಿಸದೇ ಓಡಾಡುವುದನ್ನು ನೋಡಿದಾಗ ಅಚ್ಚರಿಯಾಯಿತು," ಎಂದು ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಇಷ್ಟೆಲ್ಲಾ ವಾಯು ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ಭಾರತವು ರಾಷ್ಟ್ರೀಯ ತುರ್ತುಸ್ಥಿತಿಯನ್ನು ಏಕೆ ಘೋಷಿಸುತ್ತಿಲ್ಲ ಎಂದು ಜಾನ್ಸನ್ ಆಶ್ಚರ್ಯಪಟ್ಟರು. ಯಾವ ಹಿತಾಸಕ್ತಿಗಳು, ಹಣ ಮತ್ತು ಅಧಿಕಾರವು ಇದನ್ನು ನಿರ್ಲಕ್ಷ್ಯಿಸುವಂತೆ ಮಾಡುತ್ತದೆಯೋ ಎಂದು ನನಗೆ ತಿಳಿದಿಲ್ಲ. ಆದರೆ ಅದು ಇಡೀ ದೇಶಕ್ಕೆ ನಿಜವಾಗಿಯೂ ಕೆಟ್ಟದು ಎಂದು ಜಾನ್ಸನ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.