ಬದಿಯಡ್ಕ: ಕೆಎಸ್‍ಟಿಎ ಕುಂಬಳೆ ಉಪಜಿಲ್ಲಾ ಉಪಸಮಿತಿಯ ನೇತೃತ್ವದಲ್ಲಿ ಫೆ. 22 ರಂದು(ಇಂದು) ನಡೆಯಲಿರುವ ಎಲ್‍ಎಸ್‍ಎಸ್/ಯುಎಸ್‍ಎಸ್ ಮಾದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಂಘಟನಾ ಸಮಿತಿಯ ಸಭೆ ಬೇಳ ಸೈಂಟ್ ಭಾರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆಯಿತು.
ಸಭೆಯನ್ನು ಬಿ.ವಿಷ್ಣುಪಾಲ್ ಉದ್ಘಾಟಿಸಿದರು. ಸಿಸ್ಟರ್ ಎಲಿಜಬೆತ್, ಕೆ.ಕೆ. ಮೋಹನನ್, ಬಿನ್ನಿ ಐರಾಟ್ಟಿಲ್, ವಿನೋದ್ ಕ್ರಾಸ್ತಾ ಮತ್ತು ರಾಜನ್ ಎ ಮಾತನಾಡಿದರು. ಮಾದರಿ ಪರೀಕ್ಷೆಗಳು ಜಿ. ವಿ.ಎಚ್.ಎಸ್. ಕಾರಡ್ಕ, ಜಿ. ಎಚ್.ಎಸ್.ಎಸ್. ಪೆರಡಾಲ, ಸಂತ ಬಾರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲೆ ಬೇಳ ಎಂಬ ಮೂರು ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗಳ ಉಪಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಬೆಳಿಗ್ಗೆ 9.30 ಕ್ಕೆ ಬೇಳ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ.ವಿ. ನಿರ್ವಹಿಸುವರು.
ಸಭೆಯಲ್ಲಿ ಪದಾಧಿಕಾರಿಗಳಾದ ಅಧ್ಯಕ್ಷೆ ಸಿಸ್ಟರ್ ಎಲಿಜಬೆತ್ ವೈ, ಅಧ್ಯಕ್ಷ ರಾಜನ್.ಎ.,ಸಂಚಾಲಕ ವಿನೋದ್ ಕ್ರಾಸ್ತಾ, ಸಹ ಸಂಚಾಲಕ ಬಿನ್ನಿ ಐರಾಟ್ಟಿಲ್ ಉಪಸ್ಥಿತರಿದ್ದರು. ಈ ಸಂದರ್ಭ ಪರೀಕ್ಷೆಯ ಸಂಘಟನಾ ಸಮಿತಿ ರಚಿಸಲಾಯಿತು. ಉಪ ಜಿಲ್ಲೆಯಲ್ಲಿ ಸುಮಾರು 1200 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.